ಮೃತ ವಾಸುದೇವ್ ಭಟ್ ತಮ್ಮ ಕನಸಲ್ಲಿ ಬಂದು, ತನ್ನ ಶವವು ದೇವಸ್ಥಾನದ ಆಸುಪಾಸಿನಲ್ಲೇ ಇದೆ ಎಂದು ತಿಳಿಸಿದರು. ಹೀಗಾಗಿ, ಅವರ ಶವವನ್ನು ಇಲ್ಲೇ ಹತ್ತಿರದಲ್ಲೇ ಹುಡುಕಿರಿ ಎಂದು ವಾಸುದೇವ್'ನ ಸಂಬಂಧಿಕರು ಶಾಸಕ ಗೋಪಾಲಯ್ಯ ಬಳಿ ಹೇಳಿಕೊಂಡಿದ್ದರು. ಇದಕ್ಕೆ ಸ್ಪಂದಿಸಿದ ಶಾಸಕರು ಕೂಡಲೇ ರಕ್ಷಣಾ ಕಾರ್ಯಾಚರಣೆ ಸಿಬ್ಬಂದಿಯನ್ನು ವಾಪಸ್ ಕುರುಬರಹಳ್ಳಿಗೆ ಕರೆಸಿಕೊಂಡಿದ್ದಾರೆ

ಬೆಂಗಳೂರು(ಅ. 14): ನಿನ್ನೆ ಕುರುಬರಹಳ್ಳಿಯಲ್ಲಿ ಮಳೆ ನೀರಿಗೆ ಕೊಚ್ಚಿಹೋಗಿದ್ದ ಅರ್ಚಕ ವಾಸುದೇವ್ ಶವ ಇಂದು ಬೆಳಗ್ಗೆ ಸಿಕ್ಕಿದೆ. ವಾಸುದೇವ್ ಭಟ್ ಶವದ ಪತ್ತೆಯ ಹಿಂದೆ ಪವಾಡದ ರೀತಿಯ ಘಟನೆ ನಡೆದಿರುವುದು ಬೆಳಕಿಗೆ ಬಂದಿದೆ. ವಾಸುದೇವ್ ಭಟ್ ಶವವು ಕೆಂಗೇರಿ ಮೋರಿಗೆ ಹೋಗಿರಬಹುದೆಂದು ಅಲ್ಲಿಗೆ ತೆರಳಿದ್ದ ಸಿಬ್ಬಂದಿಯು ಕುರುಬರಹಳ್ಳಿಗೆ ವಾಪಸ್ ಕರೆಸಿ ಶವಪತ್ತೆ ಮಾಡಲಾಗಿತ್ತು. ಮೃತಪಟ್ಟ ವಾಸುದೇವ್ ಭಟ್ ಅವರ ಸಂಬಂಧಿಕರು ರಕ್ಷಣಾ ಸಿಬ್ಬಂದಿಯನ್ನು ಕುರುಬರಹಳ್ಳಿಗೆ ವಾಪಸ್ ಕರೆಸಿಕೊಂಡಿದ್ದರು.

ಕನಸಲ್ಲಿ ಬಂದು ಹೇಳಿದರೇ ಮೃತವ್ಯಕ್ತಿ?
ಮೃತ ವಾಸುದೇವ್ ಭಟ್ ತಮ್ಮ ಕನಸಲ್ಲಿ ಬಂದು, ತನ್ನ ಶವವು ದೇವಸ್ಥಾನದ ಆಸುಪಾಸಿನಲ್ಲೇ ಇದೆ ಎಂದು ತಿಳಿಸಿದರು. ಹೀಗಾಗಿ, ಅವರ ಶವವನ್ನು ಇಲ್ಲೇ ಹತ್ತಿರದಲ್ಲೇ ಹುಡುಕಿರಿ ಎಂದು ವಾಸುದೇವ್'ನ ಸಂಬಂಧಿಕರು ಶಾಸಕ ಗೋಪಾಲಯ್ಯ ಬಳಿ ಹೇಳಿಕೊಂಡಿದ್ದರು. ಇದಕ್ಕೆ ಸ್ಪಂದಿಸಿದ ಶಾಸಕರು ಕೂಡಲೇ ರಕ್ಷಣಾ ಕಾರ್ಯಾಚರಣೆ ಸಿಬ್ಬಂದಿಯನ್ನು ವಾಪಸ್ ಕುರುಬರಹಳ್ಳಿಗೆ ಕರೆಸಿಕೊಂಡಿದ್ದಾರೆ. ಶಾಸಕರ ಸೂಚನೆ ಮೇರೆ ದೇವಸ್ಥಾನದ ಸುತ್ತಲ ಚರಂಡಿಗಳಲ್ಲಿ ಸಿಬ್ಬಂದಿ ಹುಡುಕಾಟ ನಡೆಸಿದ್ದಾರೆ. ಅಚ್ಚರಿ ಎಂಬಂತೆ ವೆಂಕಟರಮಣಸ್ವಾಮಿ ದೇವಸ್ಥಾನದಿಂದ ಕೇವಲ ಅರ್ಧ ಕಿ.ಮೀ. ದೂರದ ಸ್ಥಳದಲ್ಲೇ ವಾಸುದೇವ್ ಭಟ್ ಶವ ಪತ್ತೆಯಾಗಿದೆ.

ಶವ ಪತ್ತೆ ವಿಚಾರದಲ್ಲಿ ಪರಿಣಿತರಾಗಿದ್ದ ಎನ್'ಡಿಆರ್'ಎಫ್ ಸಿಬ್ಬಂದಿಯು ವಾಸುದೇವ್ ಶವ ಕೆಂಗೇರಿ ಮೋರಿ ತಲುಪಿರಬಹುದೆಂದು ಅಂದಾಜು ಮಾಡಿದ್ದರು. ಆದರೆ, ಅವರ ಲೆಕ್ಕಾಚಾರ ಉಲ್ಟಾ ಆಗಿತ್ತು.