ಕಲ್ಲಡ್ಕ ಶಾಲೆಗೆ ಅನುದಾನ ಕಡಿತ : ಅಲ್ಪ ಸಂಖ್ಯಾತ ಶಿಕ್ಷಣ ಸಂಸ್ಥೆಗೆ ಕೋಟಿ-ಕೋಟಿ ಅನುದಾನ..!

First Published 7, Mar 2018, 9:15 AM IST
Minority School Get More Money In Bengaluru
Highlights

ಕಲ್ಲಡ್ಕ ಪ್ರಭಾಕರ ಭಟ್ ರ ಮುಂದಾಳತ್ವದಲ್ಲಿ ನಡೆಯುತ್ತಿರುವ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರಕ್ಕೆ ನೀಡಲಾಗುತ್ತಿದ್ದ ಅನುದಾನಕ್ಕೆ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಕತ್ತರಿ ಹಾಕಿತ್ತು. ಆದರೆ ಇದೀಗ ಬೆಂಗಳೂರಿನಲ್ಲಿ ಅಲ್ಪ ಸಂಖ್ಯಾತ ಸಮುದಾಯಕ್ಕೆ ಸೇರಿದ ಶಿಕ್ಷಣ ಸಂಸ್ಥೆಗೆ ಕೋಟಿ-ಕೋಟಿ ಹಣ ನೀಡಲು ಮುಂದಾಗಿದೆ.ಇದರಲ್ಲಿ ಸಚಿವ ಕೆ.ಜೆ.ಜಾರ್ಜ್ ರವರ ರಾಜಕೀಯ  ಹಿತಾಸಕ್ತಿ ಅಡಗಿರುವ ಬಗ್ಗೆ ಅನುಮಾನ ಮೂಡುತ್ತಿದೆ.

ಬೆಂಗಳೂರು : ಕಲ್ಲಡ್ಕ ಪ್ರಭಾಕರ ಭಟ್ ರ ಮುಂದಾಳತ್ವದಲ್ಲಿ ನಡೆಯುತ್ತಿರುವ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರಕ್ಕೆ ನೀಡಲಾಗುತ್ತಿದ್ದ ಅನುದಾನಕ್ಕೆ ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಕತ್ತರಿ ಹಾಕಿತ್ತು. ಆದರೆ ಇದೀಗ ಬೆಂಗಳೂರಿನಲ್ಲಿ ಅಲ್ಪ ಸಂಖ್ಯಾತ ಸಮುದಾಯಕ್ಕೆ ಸೇರಿದ ಶಿಕ್ಷಣ ಸಂಸ್ಥೆಗೆ ಕೋಟಿ-ಕೋಟಿ ಹಣ ನೀಡಲು ಮುಂದಾಗಿದೆ.ಇದರಲ್ಲಿ ಸಚಿವ ಕೆ.ಜೆ.ಜಾರ್ಜ್ ರವರ ರಾಜಕೀಯ  ಹಿತಾಸಕ್ತಿ ಅಡಗಿರುವ ಬಗ್ಗೆ ಅನುಮಾನ ಮೂಡುತ್ತಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಶಾಲಾ-ಕಾಲೇಜುಗಳ ಅಭಿವೃದ್ಧಿಗೆ ಬಿಬಿಎಂಪಿಯಲ್ಲಿ ಹಣವಿಲ್ಲ. ಕಾರಣ ಆದಾಯದ ಮೂಲವಿಲ್ಲದೆ ಆರ್ಥಿಕ ಸಂಕಷ್ಟದಲ್ಲಿ ಪಾಲಿಕೆ ಇದೆ.ಇಂತಹ ಸಂದರ್ಭದಲ್ಲಿ ಬೆಂಗಳೂರು ನಗರ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಅವರ ಕ್ಷೇತ್ರವಾದ ಸರ್ವಜ್ಞನಗರ ವಿಧಾನ ಕ್ಷೇತ್ರದ ವ್ಯಾಪ್ತಿಯಲ್ಲಿರುವ ಅರೆಬಿಕ್ ಕಾಲೇಜಿನ ಅಭಿವೃದ್ಧಿಗೆ 10 ಕೋಟಿ ಹಾಗೂ ಜಾಮಿಯ ಮಸೀದಿ ಮತ್ತು ಮುಸ್ಲಿಂ ಚಾರಿಟೇಬಲ್ ಫಂಡ್ ಟ್ರಸ್ಟ್ ಸ್ಕೂಲ್ ಜಾಮಿಯ ಉಲ್ ಉಲಾಮು ಗ್ರೂಪ್  ಶಾಲಾ ಕಟ್ಟಡ ನಿರ್ಮಾಣಕ್ಕೆ 10 ಕೋಟಿ ಹಣವನ್ನು ಬಿಬಿಎಂಪಿ ಬಜೆಟ್ ನಲ್ಲಿ ಘೋಷಣೆ ಮಾಡಲಾಗಿದೆ.

ಇದು ಹಲವು ಅನುಮಾನಕ್ಕೆ ಕಾರಣವಾಗಿದೆ.ಕಲ್ಲಡ್ಕ ಪ್ರಭಾಕರ ಭಟ್ ರ ಮುಂದಾಳತ್ವದಲ್ಲಿ ನಡೆಯುತ್ತಿರುವ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರಕ್ಕೆ ನೀಡಲಾಗುತ್ತಿದ್ದ ಅನುದಾನಕ್ಕೆ ಕತ್ತರಿ ಹಾಕಿರುವ ಸರ್ಕಾರ  ಅಲ್ಪ ಸಂಖ್ಯಾತ ಸಮುದಾಯಕ್ಕೆ ಸೇರಿದ ಶಿಕ್ಷಣ ಸಂಸ್ಥೆ ಮೇಲೆ ಏಕೆ ಪ್ರೀತಿ ಎಂಬ ಪ್ರಶ್ನೆ ಮೂಡುತ್ತಿದೆ. ಫೆ.28 ರಂದು ಮಂಡನೆಯಾದ ಬಿಬಿಎಂಪಿ ಆಯವ್ಯಯದಲ್ಲಿ ಬರೋಬ್ಬರಿ 20 ಕೋಟಿ. ಖಾಸಗಿ ಶಿಕ್ಷಣ ಸಂಸ್ಥೆಗೆ ಘೋಷಿಸಿದ್ದು, ಇಸ್ಲಾಮಿಕ ಧರ್ಮದ ಮತದಾರರ ಓಲೈಕೆಗಾಗಿ ಕೋಟಿ- ಕೋಟಿ ಅನುಧಾನ ಘೋಷಣೆ ಹಿಂದಿರುವ ಉದ್ದೇಶವೇ ಎಂಬ ಅನುಮಾನ ಮೂಡಿದ್ದು, ಸಚಿವ ಜಾರ್ಜ್ ರವರ ಮಾಸ್ಟರ್ ಪ್ಲಾನ್ ಅಂತಾಲೂ ಹೇಳಲಾಗುತ್ತಿದೆ.

loader