ಕರ್ನಾಟಕ ಸರ್ಕಾರದಲ್ಲಿ ಕೆಲವು ಸಚಿವರು ಭ್ರಷ್ಟಾಚಾರಿಗಳಿದ್ದಾರೆ ಅವರಿಂದ ಸರ್ಕಾರಕ್ಕೆ  ಕೆಟ್ಟ ಹೆಸರಿದೆಯೇ ಎನ್ನುವ ಬಗ್ಗೆ ಜನಾಭಿಪ್ರಾಯಕೆಟ್ಟ ಮಂತ್ರಿಗಳಿಂದ ಸರ್ಕಾರಕ್ಕೆ ಕೆಟ್ಟ ಹೆಸರು ಬಂದಿದ್ದು ನಿಜ – ಶೇ. 38 ಭ್ರಷ್ಟ ಮಂತ್ರಿಗಳಿಂದ ಕೆಟ್ಟ ಹೆಸರು ಬಂದಿದ್ದರೂ ಇರಬಹುದು – ಶೇ. 36ಸಚಿವರು ಭ್ರಷ್ಟಾಚಾರದಲ್ಲಿ ಭಾಗಿಯಾಗಿಲ್ಲ, ಅವರಿಂದ ಕೆಟ್ಟ ಹೆಸರು ಬಂದಿರಲೂ ಸಾಧ್ಯವಿಲ್ಲ – ಶೇ. 12ಸರ್ಕಾರದಲ್ಲಿನ ಸಚಿವರು ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ – ಶೇ. 12

ಬೆಂಗಳೂರು(ಡಿ.7): ಹಿಂದಿನ ಬಿಜೆಪಿ ಸರ್ಕಾರದ ಅವಧಿಯಷ್ಟು ಭ್ರಷ್ಟಾಚಾರ ಆರೋಪಗಳು ಈ ಸರ್ಕಾರದಲ್ಲಿ ಕೇಳಿಬಂದಿಲ್ಲವಾದರೂ, ಸಿದ್ದರಾಮಯ್ಯ ಸಂಪುಟದಲ್ಲಿ ಭ್ರಷ್ಟಾಚಾರಿಗಳು ಹೆಚ್ಚಿದ್ದಾರೆ, ಅವರಿಂದಾಗಿ ಸರ್ಕಾರಕ್ಕೆ ಕೆಟ್ಟ ಹೆಸರು ಬರುತ್ತಿದೆ ಎಂದು ಬಹುಪಾಲು ಜನರು ಖಚಿತವಾಗಿ ನುಡಿದಿರುವುದು ಸರ್ಕಾರಕ್ಕೆ ಹಿನ್ನಡೆಯಲ್ಲದೆ ಮತ್ತೇನೂ ಅಲ್ಲ. ತಮ್ಮ ಸರ್ಕಾರ ಭ್ರಷ್ಟಾಚಾರರಹಿತ, ಪಾರದರ್ಶಕ ಆಡಳಿತ ನೀಡಿದೆ ಎಂದು ಹೇಳಿಕೊಳ್ಳುವ ಹಾಗೂ ಇದೇ ಕಾರಣಕ್ಕೆ ಬಿಜೆಪಿಯನ್ನು ಟೀಕಿಸುವ ಸಿದ್ದರಾಮಯ್ಯ ಅವರಿಗೆ ಇದು ಎಚ್ಚರಿಕೆಯ ಗಂಟೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮಹಿಳೆಯರಿಗಿಂತ ಪುರುಷರಲ್ಲಿ ಈ ಭಾವನೆ ಹೆಚ್ಚಿದ್ದರೆ, ಗ್ರಾಮೀಣ ಪ್ರದೇಶಗಳಿಗಿಂತ ನಗರ ಪ್ರದೇಶದಲ್ಲಿ ಸಚಿವರು ಭ್ರಷ್ಟರಿದ್ದಾರೆ ಎಂಬ ಅಭಿಪ್ರಾಯ ಕೇಳಿಬಂದಿದೆ. ವಿವಿಧ ಸಮುದಾಯಗಳ ಪೈಕಿ ಒಕ್ಕಲಿಗರಲ್ಲಿ ಶೇ.51 ಮಂದಿ ಭ್ರಷ್ಟ ಮಂತ್ರಿಗಳು ಇದ್ದಾರೆ ಎಂದು ಹೇಳಿರುವುದು ಗಮನಾರ್ಹ. ಆದರೆ ದಲಿತರಲ್ಲಿ ಶೇ.47 ಮಂದಿ ಅದಕ್ಕೆ ತದ್ವಿರುದ್ಧವಾದ ಭಾವನೆ ತೋಡಿಕೊಂಡಿದ್ದಾರೆ.