2 ವರ್ಷಕ್ಕೊಮ್ಮೆ ಸಚಿವರ ಬದಲಾವಣೆ | ಮುಂದಿನ ತಿಂಗಳು ಸಚಿವ ಸಂಪುಟ ವಿಸ್ತರಣೆ ಖಚಿತ | ಸಮ್ಮಿಶ್ರ ಸರ್ಕಾರವಾದ್ದರಿಂದ ಬಹುತೇಕ ಶಾಸಕರಿಗೆ ಸಚಿವರಾಗುವ ಸಾಧ್ಯತೆ ಕಡಿಮೆ| 

ಚಿತ್ರದುರ್ಗ (ಆ. 29):  ಮುಂದಿನ ತಿಂಗಳು ಸಚಿವ ಸಂಪುಟ ವಿಸ್ತರಣೆ ಖಚಿತ ಎಂದು ಪುನರುಚ್ಚರಿಸಿರುವ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌, ಇದೀಗ ಸಮ್ಮಿಶ್ರ ಸರ್ಕಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಚಿವರ ಅಧಿಕಾರಾಧಿಯ​ನ್ನು ಎರಡು ವರ್ಷಗಳಿಗಳಿಗಷ್ಟೇ ಸೀಮಿತಗೊಳಿಸಲಾಗಿದ್ದು ನಂತರ ಬದಲಾಯಿಸಿ ಬೇರೆಯವರಿಗೆ ಅವಕಾಶ ಮಾಡಿಕೊಡಲಾಗುವುದು ಎಂದು ತಿಳಿಸಿದ್ದಾರೆ.

ಸಮ್ಮಿಶ್ರ ಸರ್ಕಾರವಾದ್ದರಿಂದ ಬಹುತೇಕ ಶಾಸಕರಿಗೆ ಸಚಿವರಾಗುವ ಸಾಧ್ಯತೆ ಕಡಿಮೆ ಇವೆ. ಹಾಗಾಗಿ, ಮೊದಲ ಎರಡು ವರ್ಷಗಳಿಗೆ ಒಂದಿಷ್ಟುಮಂದಿಗೆ ಅವಕಾಶ ಮಾಡಿಕೊಡಲಾಗಿದ್ದು, ಉಳಿದ ಮೂರು ವರ್ಷಕ್ಕೆ ಉಳಿದವರನ್ನು ಪರಿಗಣಿಸಲಾಗುವುದು. ಈ ವಿಚಾರದಲ್ಲಿ ಯಾವುದೇ ಗೊಂದಲಗಳು ಬೇಡ. ಮುಂದಿನ ತಿಂಗಳು ಸಚಿವ ಸಂಪುಟ ವಿಸ್ತರಣೆಯಾಗಲಿದ್ದು, ಉಳಿದ ಸ್ಥಾನಗಳಿಗೆ ಭರ್ತಿ ಮಾಡಿಕೊಳ್ಳಲಾಗುವುದು ಎಂದರು.