ಬೆಂಗಳೂರು [ ಸೆ.14] : ಸೆಪ್ಟೆಂಬರ್ 29 ರಂದು ಮೈಸೂರು ದಸರಾ ಆರಂಭವಾಗಲಿದ್ದು, ಉಸ್ತುವಾರಿ ಸಚಿವ ಸೋಮಣ್ಣ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದಾರೆ.

ಈ ವೇಳೆ ಮಾತನಾಡಿರುವ ವಸತಿ ಸಚಿವ ಸೋಮಣ್ಣ, ಸಿಎಂರನ್ನು ಸ್ವಾಗತ ಸಮಿತಿಯ ಶಾಸಕರು ಪದಾಧಿಕಾರರು  ಬಂದು ದಸರಾ ಮಹೋತ್ಸಕ್ಕೆ ಆಹ್ವಾನಿಸಿದ್ದೇವೆ.  29 ರಂದು ದಸರಾ ಹಬ್ಬ ಪ್ರರಂಭವಾಗಲಿದೆ.  29 ರ ಬೆಳಿಗ್ಗೆ 9 ಗಂಟೆಯ ನಂತರ ಚಾಮುಂಡಿ ದೇವಿಗೆ ಪೂಜೆ ಸಲ್ಲಿಸಿ ದಸರಾಗೆ ಚಾಲನೆ ನೀಡಲಾಗುವುದು ಎಂದರು. 

ಅಕ್ಟೋಬರ್ 8ರವರೆಗೂ  ದಸರಾದ ವಿವಿಧ ಕಾರ್ಯಕ್ರಮಗಳು ನಡೆಯಲಿದೆ. ಆ ಎಲ್ಲ ಕಾರ್ಯಕ್ರಮಕ್ಕೂ ಸಿಎಂರನ್ನು ಆಹ್ವಾನಿಸಿದ್ದೇವೆ. ರಾಜ್ಯಪಾಲರು , ಹೈಕೋರ್ಟ್ ಮುಖ್ಯ ನ್ಯಾಯದೀಶರನ್ನು ಆಹ್ವಾನಿಸಲಾಗಿದೆ.  ಸಿಎಂ ಪಿ.ವಿ.ಸಿಂಧೂರವರಿಗೆ ಅಧಿಕೃತ ಪತ್ರವನ್ನು ಬರೆದಿದ್ದಾರೆ ಪಿ.ವಿ.ಸಿಂಧೂರನ್ನು ಸರ್ಕಾರಿ ಅತಿಥಿಯಾಗಿ ಆಹ್ವಾನಿಸಲಾಗಿದೆ ಎಂದರು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಮೈಸೂರು ಶಾಸಕ ರಾಮದಾಸ್ ದಸರಾದಿಂದ ದೂರವಿರುವ ವಿಚಾರದ ಬಗ್ಗೆಯೂ ಈ ವೇಳೆ ಪ್ರತಿಕ್ರಿಯಿಸಿದ್ದು,  ರಾಮದಾಸ್ ನಮ್ಮ ಜೊತೆಯಲ್ಲೇ ಇದ್ದಾರೆ. ದಸರಾ ಉಪಸಮಿತಿಗಳಲ್ಲಿ ಅವರ ಜವಾಬ್ದಾರಿಯಿದೆ. ಅದನ್ನು ಮೈಸೂರಿನಲ್ಲಿ ನಿಭಾಯಿಸುತ್ತಿದ್ದಾರೆ ಜಿ.ಟಿ. ದೇವೇಗೌಡರು ಹಿರಿಯರು ಅವರಿಗೆ ಮೈಸೂರು ದಸರಾ ಬಗ್ಗೆ ಅನುಭವವಿದೆ. ಅವರು ನಮಗೆ ಮಾರ್ಗದರ್ಶನ ಮಾಡುತ್ತಿದ್ದಾರೆ ಎಂದರು.