ಮಂಗಳೂರು, [ಅ.07]: ದಕ್ಷಿಣ ಕನ್ನಡ ಉಸ್ತುವಾರಿ ಸಚಿವ ಯುಟಿ ಖಾದರ್ ದೊಡ್ಡ ವಿವಾದಕ್ಕೀಡಾಗಿದ್ದಾರೆ. ಮಂಗಳೂರನ್ನ ಸ್ಮಾರ್ಟ್ ಸಿಟಿ ಮಾಡಿ ಅಂತ ಕೊಟ್ಟಿರೋ 15 ಕೋಟಿ ಹಣವನ್ನ ಅಕ್ರಮಗಳ ಆರೋಪ ಹೊತ್ತಿರುವ ಕುದ್ರೋಳಿ ಕಸಾಯಿಖಾನೆಗೆ ಕೊಟ್ಟು ವಿವಾದಕ್ಕೆ ಕಾರಣರಾಗಿದ್ದಾರೆ.

 ಕದ್ದ ದನಗಳನ್ನೆಲ್ಲಾ ಕುದ್ರೋಳಿ ಕಸಾಯಿಖಾನೆಯಲ್ಲೇ ವಧೆ ಮಾಡಲಾಗುತ್ತದೆ ಎಂಬ ಆರೋಪವಿದೆ. ಆದ್ರೆ ಈಗ ಅದೇ ಕಸಾಯಿಖಾನೆಯ ಅಭಿವೃದ್ಧಿಗೆ ಸಚಿವ ಯುಟಿ ಖಾದರ್ 15 ಕೋಟಿ ರೂಪಾಯಿ ಅನುದಾನ ನೀಡಿರೋದು ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. 

ಒಂದೆಡೆ ಗೋಶಾಲೆಗಳಿಗೆ ಕೊಡಬೇಕಾದ ಅನುದಾನ ಇನ್ನೂ ಮಂಜೂರಾಗಿಲ್ಲ. ಇದ್ರಿಂದ ಗೋ ಶಾಲೆಗಳು ಸರ್ಕಾರ ಮುಂದೆ ಕೈಯೊಡ್ಡುವ ಪರಿಸ್ಥಿತಿ ನಿರ್ಮಾಣವಾಗಿದೆ.  ಈ ನಡುವೆ ಯು.ಟಿ. ಖಾದರ್ ಒಂದೇ ಕಸಾಯಿಖಾನೆಗೆ 15 ಕೋಟಿ ಅನುದಾನ ನೀಡಿದ್ದು ಎಷ್ಟು ಸರಿ ಎಂದು ಆಕ್ರೋಶಗಳು ವ್ಯಕ್ತವಾಗಿವೆ.