ಕಾಂಗ್ರೆಸ್‌ ಸೇರುವ ಕುರಿತಂತೆ ವಸತಿ ಸಚಿವ ಎಂ. ಕೃಷ್ಣಪ್ಪ ಪ್ರತಿಕ್ರಿಯೆ ನೀಡಿದ್ದಾರೆ.
ಬೆಂಗಳೂರು(ಜ.22): ತಮ್ಮ ಕ್ಷೇತ್ರದ ವಿರೋಧಿ ಎಂದೇ ಹೇಳಲಾಗುವ ಮಾಜಿ ಸಚಿವ ವಿ. ಸೋಮಣ್ಣ ಕಾಂಗ್ರೆಸ್ ಸೇರುವ ಕುರಿತಂತೆ ವಸತಿ ಸಚಿವ ಎಂ. ಕೃಷ್ಣಪ್ಪ ಪ್ರತಿಕ್ರಿಯೆ ನೀಡಿದ್ದಾರೆ.
'ಸೋಮಣ್ಣಗೆ ಪಾಪ ಈಗ ಜಿಜ್ಞಾಸೆ ಕಾಡ್ತಿದೆ, ಅವರು ಕಾಂಗ್ರೆಸ್'ಗೆ ಬರೋದಾದ್ರೆ ಬರಲಿ. ಕಾಂಗ್ರೆಸ್ ತತ್ವ ಸಿದ್ದಾಂತ ಒಪ್ಪಿ ಬರುವವರಿಗೆ ಪಕ್ಷದಲ್ಲಿ ಸ್ವಾಗತ ಇದೆ. ಕಾಂಗ್ರೆಸ್'ನ ತತ್ವ ಸಿದ್ದಾಂತ ಈಗ ಮತ್ತೆ ಅವರಿಗೆ ನೆನಪಾಗಿರಬೇಕು. ಮೊದಲು ಅವರು ಕಾಂಗ್ರೆಸ್'ನಲ್ಲೆ ಇದ್ದವರು. ಈಗ ಮತ್ತೆ ಕಾಂಗ್ರೆಸ್ ಮೇಲೆ ಆಸೆ ಉಂಟಾಗಿರಬಹುದು. ಬಿಜೆಪಿಯ ಕೆಲ ಅತೃಪ್ತರು ಕಾಂಗ್ರೆಸ್ ಬಾಗಿಲು ತಟ್ಟಿದ್ದಾರೆ ಎಂದು ದಿನೇಶ್ ಗುಂಡುರಾವ್ ಹೇಳಿದ್ದಾರೆ. ಹಾಗೆ ಸೋಮಣ್ಣ ಕೂಡ ಕಾಂಗ್ರೆಸ್'ಗೆ ಬರೋದಾದ್ರೆ ಬರಲಿ, ಸ್ವಾಗತವಿದೆ.
ಸೋಮಣ್ಣ ಒಬ್ಬ ಹಿರಿಯ ನಾಯಕ, ಪಕ್ಷದ ಕಾರ್ಯಕರ್ತನಾಗಿರಲಿ' ಎಂದು ವ್ಯಂಗ್ಯಬರಿತವಾಗಿ ಹೇಳಿದರು.
