ಬೆಳಗಾವಿ(ಜು. 06) ರಮೇಶ್ ಜಾರಕಿಹೊಳಿ ರಾಜೀನಾಮೆ ಕೊಟ್ಟಿದ್ದು ಮಾಧ್ಯಮಗಳಿಂದ ನನಗೆ ಗೊತ್ತಾಗಿದೆ. ಅಂತಿಮವಾಗಿ ಸ್ಪೀಕರ್ ತೀರ್ಮಾನ ಕಾಯ್ದು ನೋಡಬೇಕು,. ರಾಜೀನಾಮೆ ಕೊಟ್ಟವರು ಅದನ್ನು ಹಿಂಪಡೆಯಲಿದ್ದಾರೆ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

ರಾಜೀನಾಮೆ ಪರ್ವದ ನಡುವೆ ಟ್ರಬಲ್ ಶೂಟರ್‌ ಡಿಕೆಶಿಗೆ ಮತ್ತೊಂದು ಟ್ರಬಲ್

ಸರಕಾರದ ವಿಸರ್ಜನೆಯ ಬಗ್ಗೆ ವಿಧಾನಸಭೆಯಲ್ಲಿ ಚರ್ಚೆ ಆಗಬೇಕು. ಒಂದು ವೇಳೆ ಸ್ಪೀಕರ್ ರಾಜೀನಾಮೆ ಅಂಗೀಕಾರ ಮಾಡಿದ್ದೆ ಆದರೆ ಎರಡು ಪಕ್ಷದಿಂದ ರಿವರ್ಸ್ ಆಪರೇಶನ್ ಮಾಡುತ್ತೇವೆ. ರಿವರ್ಸ್ ಆಪರೇಶನ್ ಗೆ ಬೆಂಗಳೂರಿನಲ್ಲಿ ತಂಡ ಸಿದ್ಧವಾಗಿದೆ ಎಂದು ಹೇಳಿದ್ದಾರೆ.

ರಾಜೀನಾಮೆ ಸಮೂಹ ಸನ್ನಿ ಸಂಪೂರ್ಣ ಡಿಟೇಲ್ಸ್

ನಾನು ಬೆಳಗಾವಿಯಲ್ಲಿ ಆಪರೇಶನ್ ಮಾಡಲ್.  ಅದಕ್ಕೆ ಬೆಂಗಳೂರಿನಲ್ಲಿ ಒಂದು ಟೀಮ್ ಇದೆ. ಏನೇ ಆದರೂ ಜು. 12 ನೇಯ ತಾರೀಖಿಗೆ ವಿಶ್ವಾಸ ಮತಯಾಚನೆ ಮಾಡಬಹುದು. ಕಾಂಗ್ರೆಸ್ ನವರು ಸುಮ್ಮನೆ ಕುಳಿತುಕೊಂಡಿಲ್ಲ ಎಂದು ಹೇಳಿದರು.