ಮೈಸೂರು, [ಮೇ.28]: ಕಾವೇರಿ ನಾಲೆಯಿಂದ ತಮಿಳುನಾಡಿಗೆ 9.19 ಟಿಎಂಸಿ ನೀರು ಬಿಡುವ ವಿಚಾರವನ್ನು ನೂತನವಾಗಿ ಆಯ್ಕೆಯಾಗಿರುವ ಸಂಸದರು ನೋಡಿಕೊಳ್ಳುತ್ತಾರೆ ಎಂದು ಸಚಿವ ಸಾರಾ ಮಹೇಶ್​ ಹೇಳಿದ್ದಾರೆ.

ತಮಿಳುನಾಡಿಗೆ ನೀರು ಬಿಡುವ ವಿಚಾರವಾಗಿ ಮೈಸೂರಿನಲ್ಲಿ ಪ್ರತಿಕ್ರಿಯಿಸಿದ ಅವರು, ರಾಜ್ಯದಿಂದ 24 ಸಂಸದರು ಆಯ್ಕೆಯಾಗಿದ್ದಾರೆ. ಅದ್ರಲ್ಲಿ ಹಲವು ಹಿರಿಯರಿದ್ದಾರೆ. ಈ ಬಗ್ಗೆ ಬರುವ ಕಾನೂನಾತ್ಮಕ ತೊಡಕುಗಳನ್ನ ಅವರು ಬಗೆಹರಿಸುತ್ತಾರೆ ಎಂದು ಓರ್ವ ರಾಜ್ಯದ ಮಂತ್ರಿಯಾಗಿ  ಬೇಜವಾಬ್ದಾರಿ ಮಾತುಗಳನ್ನಾಡಿದರು. 

ಕಾವೇರಿ ನದಿ ನೀರು ಹಂಚಿಕೆ: ಕರ್ನಾಟಕಕ್ಕೆ ಆಘಾತ..!

ಕಾವೇರಿ ನದಿ ನೀರು ಹಂಚಿಕೆಯಲ್ಲಿ ಓರ್ವ ರಾಜ್ಯದ ಮಿನಿಸ್ಟರ್ ಆಗಿ ಎಲ್ಲರೂ ಒಗ್ಗಾಟಗಿರಬೇಕು. ಆದ್ರೆ, ಇದೀಗ ಲೋಕಸಭಾ ಚುನಾವಣೆಯಲ್ಲಿ ಸೋತ ಬಳಿಕ ಈ ರೀತಿ ಹೇಳಿಕೆ ನೀಡುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿ.

ರಾಜ್ಯದಲ್ಲಿ ತಮ್ಮ ಸರ್ಕಾರ ಇಟ್ಟುಕೊಂಡು ಜವಾಬ್ದಾರಿಯಿಂದ ಹೇಳಿಕೆ ನೀಡಬೇಕೆ ವಿನಃ, ಈ ರೀತಿಯ ಬೇಜವಾಬ್ದಾರಿ ಹೇಳಿಕೆ ಸಲ್ಲ.  ಕಾವೇರಿಯ ವಿಷಯದಲ್ಲಿ ಒಗ್ಗಟ್ಟು ಒಗ್ಗಟ್ಟು ಎಂದು ಉದ್ದುದ್ದ ಭಾಷಣ ಮಾಡುವವರು ಇದೇನಾ ನಿಮ್ಮ ಒಗ್ಗಟ್ಟು..?

ರಾಜ್ಯದ ಜಲ, ನೆಲ, ಭಾಷೆ ವಿಷಯ ಬಂದಾಗ ಒಗ್ಗಟ್ಟು ಪ್ರದಶೀಸಬೇಕು.ಇಂತಹ ವಿಚಾರಗಳಲ್ಲಿ ಸುಖಾಸುಮ್ಮನೆ ರಾಜಕೀಯ ಮಾಡುವುದು ಸರಿಯಲ್ಲ.