ದಿನನಿತ್ಯ ಏಳನೂರರಿಂದ ಎಂಟನೂರು ವಾಟ್ಸಪ್​ ಮೆಸೇಜ್ ಬೆಳಂಬೆಳಗ್ಗೆ ಬಂದು ಬೀಳುತ್ತೆ. ನೋಡಲಿಕ್ಕಾಗಲ್ಲ ಮತ್ತು ಅದಕ್ಕೆ ರಿಯಾಕ್ಟ್ ಮಾಡಲು ಆಗದೇ ಅಂತಿಮವಾಗಿ ವಾಟ್ಸ್​ಪ್​ಗೆ ಗುಡ್ ಬೈ ಹೇಳುವ ತೀರ್ಮಾನಕ್ಕೆ ರಾಮಲಿಂಗಾರೆಡ್ಡಿ ಬಂದಿದ್ದಾರೆ.

ಬೆಂಗಳೂರು(ಆ.29): ದಿನನಿತ್ಯ ಏಳನೂರರಿಂದ ಎಂಟನೂರು ವಾಟ್ಸಪ್​ ಮೆಸೇಜ್ ಬೆಳಂಬೆಳಗ್ಗೆ ಬಂದು ಬೀಳುತ್ತೆ. ನೋಡಲಿಕ್ಕಾಗಲ್ಲ ಮತ್ತು ಅದಕ್ಕೆ ರಿಯಾಕ್ಟ್ ಮಾಡಲು ಆಗದೇ ಅಂತಿಮವಾಗಿ ವಾಟ್ಸ್​ಪ್​ಗೆ ಗುಡ್ ಬೈ ಹೇಳುವ ತೀರ್ಮಾನಕ್ಕೆ ರಾಮಲಿಂಗಾರೆಡ್ಡಿ ಬಂದಿದ್ದಾರೆ.

ಗುಡ್ ಬೈ ಹೇಳಲು ಮತ್ತೊಂದು ಕಾರಣ ಅಂದರೆ, ರಾಮಲಿಂಗಾರೆಡ್ಡಿ ತಮ್ಮ ಮೊಬೈಲ್'​ಗೆ ಬರುವ ಕರೆಗಳನ್ನು ಖುದ್ದು ಅವರೇ ಸ್ವೀಕರಿಸುತ್ತಾರೆ ಮತ್ತು ಅವರೇ ರಿಯಾಕ್ಟ್ ಮಾಡ್ತಾರೆ. ಅಂತಹ ಸಂಪ್ರದಾಯವನ್ನ ರಾಮಲಿಂಗಾರೆಡ್ಡಿ ಹಾಕಿಕೊಂಡು ಬಂದಿದ್ದಾರೆ.

ಆದರೆ, ಇದೀಗ ವಾಟ್ಸಪ್​'ನಲ್ಲಿ ಬರುವ ಎಲ್ಲ ಅಭಿಮಾನಿಗಳ, ಹಿತೈಸಿಗಳ, ಕಾರ್ಯರ್ತರ, ಬಂಧುಗಳ ಮೆಸೇಜ್ ಗಳಿಗೆ ಉತ್ತರಿಸಲು ಸಾಧ್ಯವಾಗ್ತಿಲ್ಲ. ಈ ಹಿನ್ನಲೆಯಲ್ಲಿ ವಾಟ್ಸಪ್​ಗೆ ಗುಡ್ ಬೈ ಹೇಳಲು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತೀರ್ಮಾನಿಸಿದ್ದಾರೆ.