ಹಾಸನ [ಸೆ.20] : ರಾಜ್ಯ ಸರ್ಕಾರ‌ ಯಾವುದೇ ಒಬ್ಬ ಸ್ವಾಮೀಜಿ ನುಡಿಯುವ ಭವಿಷ್ಯದ ಮೇಲೆ ನಿಂತಿಲ್ಲಾ ಇದು ಜನರ ಸರ್ಕಾರ, ಜನಪ್ರತಿನಿಧಿಗಳ ಸರ್ಕಾರ ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದರು.

ಸಕಲೇಶಪುರ ತಾಲ್ಲೂಕಿನ ಅತೀವೃಷ್ಟಿ ಯಿಂದ ಹಾನಿಗೀಡಾದ ಹಲವು ಪ್ರದೇಶಗಳಿಗೆ ಭೇಟಿ‌ ನೀಡಿದ ಬಳಿಕ ಮಾತನಾಡಿದ ಅವರು ನಮ್ಮ ಬಿಜೆಪಿ ಸರ್ಕಾರ ಯಾವುದೇ ಭವಿಷ್ಯವನ್ನು ನಂಬುವುದಿಲ್ಲ.  ರಾಹುಕಾಲ ಗುಳಿಕ ಕಾಲ ನಂಬಿ ಸರ್ಕಾರ ಆಡಳಿತ ನಡೆಸುತ್ತಿಲ್ಲಾ ನಮ್ಮದು ಜನಪರ ಸರ್ಕಾರವಷ್ಟೆ ಎಂದರು.

ತನಿಖೆಗೆ ಆದೇಶ: ಇದೇ ವೇಳೆ  ಜಿಲ್ಲೆಯ ಬಹು ಚರ್ಚಿತ ಹೇಮಾವತಿ ಮುಳುಗಡೆ ಪ್ರದೇಶ ಅಕ್ರಮ ಮಂಜೂರಾತಿ ಸಂಭಂದಿಸಿದಂತೆ ವಿಶೇಷ ತನಿಖೆ‌ ನಡೆಸಿ ವರದಿ ನಿಡುವಂತೆ ಜಿಲ್ಲಾಧಿಕಾರಿ ಗೆ ಸಚಿವ ಅಶೋಕ್ ತಾಕೀತು ಮಾಡಿದರು.  

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಮುಳುಗಡೆಯ ಸಾವಿರಾರು ಎಕರೆ ಪ್ರದೇಶವನ್ನು ಅಕ್ರಮವಾಗಿ ಅರ್ಹರಲ್ಲದೆ ವ್ಯಕ್ತಿಗೆ ಮಂಜೂರಾತಿ ನೀಡಲಾಗಿದೆ.  ಒಂದೇ ವ್ಯಕ್ತಿಯ ಹೆಸರಿಗೆ ಸಾವಿರಾರು ಪರಿಹಾರ ಹಣ ಹಾಗೂ ಭೂಮಿ ಮಂಜುರಾತಿ‌ ಮಾಡಲಾಗಿದೆ‌ ಎಂದು ಜನರ ದೂರು ಹಾಗೂ ಮಾಧ್ಯಮಗಳ ವರದಿಯಿಂದ ತಿಳಿದು ಬಂದಿದೆ.  ಕೂಡಲೇ ಈ ಪ್ರಕರಣ‌ ತನಿಖೆಯಾಗಬೇಕು ಜಿಲ್ಲಾಧಿಕಾರಿ ವರದಿ ಬಳಿಕ ರಾಜ್ಯದ ಉನ್ನತ ತನಿಖೆ ಸಂಸ್ಥೆ ಯ ಮೂಲಕ ಸಮಗ್ರ ತನಿಖೆ ಮಾಡುವಂತೆ ಹಾಗೂ ಈ ಪ್ರಕರಣದಲ್ಲಿ ಭಾಗಿಯಾದ ಅಧಿಕಾರಿಗಳ ಹಾಗೂ ವ್ಯಕ್ತಿಗಳ‌ ವಿರುದ್ಧ ಕ್ರಮಕ್ಕೆ ಸೂಚಿಸಿದರು.