ಕಾವೇರಿ ನೀರು ವಿವಾದ ಕುರಿತಂತೆ ನಾರಿಮನ್ ಜೊತೆ ಎಂ.ಬಿ. ಪಾಟೀಲ್ ಚರ್ಚೆ
ನವದೆಹಲಿ(ಸೆ.10): ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್ ಕರ್ನಾಟಕ ಪರ ವಾದಿಸುತ್ತಿರುವ ವಕೀಲ ಫಾಲಿ ನಾರಿಮನ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ದೆಹಲಿಯಲ್ಲಿರುವ ನಾರಿಮನ್ ನಿವಾಸದಲ್ಲಿ ರಾಜ್ಯದ ಅಧಿಕಾರಿಗಳ ಜೊತೆ ಎಂ.ಬಿ. ಪಾಟೀಲ್ ಚರ್ಚಿಸಿದರು. ಕಾವೇರಿ ವಿಚಾರದಲ್ಲಿ ಮುಂದಿನ ಕಾನೂನು ಹೋರಾಟದ ಕುರಿತು ಚರ್ಚೆ ನಡೆಸಿದರು.
ಬಳಿಕ ಮಾತನಾಡಿದ ಎಂ.ಬಿ. ಪಾಟೀಲ್, ನೀರು ಬಿಟ್ಟಿರುವುದರಿಂದ ರಾಜ್ಯದ ಬೆಳೆಗಳಿಗೆ ತೊಂದರೆಯಾಗಿದೆ, ರಾಜ್ಯದ ವಾಸ್ತವ ಸ್ಥಿತಿ ಕುರಿತು ನಾರಿಮನ್ಗೆ ವಿವರಿಸಲಾಗಿದೆ. ತಮಿಳುನಾಡು ಸಾಂಬಾ ಬೆಳೆಗೆ ನೀರು ಕೇಳುತ್ತಿದೆ. ನಮ್ಮ ರೈತರು ಬೆಳೆಗಳಿಗಿರಲಿ, ಕುಡಿಯುವುದಕ್ಕೂ ನೀರಿಲ್ಲ ೆಂಬ ಬಗ್ಗೆ ನಾರಿಮನ್`ಗೆ ಮನವರಿಕೆ ಮಾಡಕೊಟ್ಟಿದ್ದೇವೆ. ಶೀಘ್ರವೇ ಸುಪ್ರೀಂಕೋರ್ಟ್ಗೆ ಮೇಲ್ಮನವಿ ಸಲ್ಲಿಸುತ್ತೇವೆ ಅಂತ ನಾರಿಮನ್ ಭೇಟಿ ಬಳಿಕ ಸಚಿವ ಎಂ.ಬಿ. ಪಾಟೀಲ್ ಹೇಳಿದರು.
