ಅಕ್ರಮ ಹಣ ಸಂಗ್ರಹದ ಆರೋಪದಲ್ಲಿ ಬಂಧಿಯಾಗಿರುವ ಜಯಚಂದ್ರ  ತನಿಖೆ ವೇಳೆ ಲೋಕೋಪಯೋಗಿ ಸಚಿವ ಎಚ್.ಸಿ. ಮಹದೇವಪ್ಪ ಅವರ ಹೆಸರು ಹೇಳಿದ್ದಾರೆ ಎನ್ನಲಾಗಿದ್ದು, ಪ್ರಕರಣ ಸಿಬಿಐಗೆ ವರ್ಗಾವಣೆಯಾದರೆ ಮಹದೇವಪ್ಪ ಕುರ್ಚಿಗೂ ಕಂಟಕ ಬರಲಿದೆ ಎಂಬ ಮಾತು ಕೇಳಿ ಬರುತ್ತಿದೆ. 

ಬೆಂಗಳೂರು (ಡಿ.15): ಕಾಂಗ್ರೆಸ್​ನಲ್ಲಿ ಮೇಟಿ ವಿಕೆಟ್ ಪತನವಾದ ಬೆನ್ನಲ್ಲೇ ಶೀಘ್ರದಲ್ಲಿಯೇ ಮತ್ತೊಂದು ವಿಕೇಟ್ ಬೀಳಲಿದೆ ಎಂಬ ಮಾತುಗಳು ಕಾಂಗ್ರೆಸ್ ವಲಯದಲ್ಲಿ ಬಲವಾಗಿ ಕೇಳಿ ಬರುತ್ತಿವೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅಕ್ರಮ ಹಣ ಸಂಗ್ರಹದ ಆರೋಪದಲ್ಲಿ ಬಂಧಿಯಾಗಿರುವ ಜಯಚಂದ್ರ ತನಿಖೆ ವೇಳೆ ಲೋಕೋಪಯೋಗಿ ಸಚಿವ ಎಚ್.ಸಿ. ಮಹದೇವಪ್ಪ ಅವರ ಹೆಸರು ಹೇಳಿದ್ದಾರೆ ಎನ್ನಲಾಗಿದ್ದು, ಪ್ರಕರಣ ಸಿಬಿಐಗೆ ವರ್ಗಾವಣೆಯಾದರೆ ಮಹದೇವಪ್ಪ ಕುರ್ಚಿಗೂ ಕಂಟಕ ಬರಲಿದೆ ಎಂಬ ಮಾತು ಕೇಳಿ ಬರುತ್ತಿದೆ. 

ಜಯಚಂದ್ರನನ್ನು ವಶಕ್ಕೆ ಪಡೆದ ಇ.ಡಿ ಅಧಿಕಾರಿಗಳು ವಿಚಾರಣೆ ನಡೆಸಿದ್ದಾಗ ಜಯಚಂದ್ರ ಹಣದಲ್ಲಿ ಸಚಿವ ಸಚಿವ ಮಹದೇವಪ್ಪನವರ ಪಾಲು ಇದೆ ಎಂದು ಬಾಯಿಬಿಟ್ಟಿದ್ದಾನೆ.

ಹೀಗಾಗಿ ಸಿಬಿಐ, ಸಚಿವ ಮಹದೇವಪ್ಪ ಅವರನ್ನು ವಿಚಾರಣೆಗೆ ಕರೆಸುವ ಸಾಧ್ಯತೆ ಇದೆ. ಆ ಮುಜುಗರದಿಂದ ತಪ್ಪಿಸಿಕೊಳ್ಳಲು ಸಿಎಂ ಮಹದೇವಪ್ಪರಿಂದ ರಾಜೀನಾಮೆ ಪಡೆಯುವ ಪ್ರಸಂಗ ಎದುರಾಗಬಹುದು ಎನ್ನಲಾಗುತ್ತಿದೆ.