ಎಲ್ಲಾ ಬೆಳವಣಿಗೆಗಳನ್ನು ಬಾರ್ಡರ್​​​​​​​​ನಲ್ಲಿ ಇದ್ದು ನೋಡ್ತಾ ಇರ್ತೀವಿ. ನಮಗೆ ಅವರಿಗಿಂತ ಚೆನ್ನಾಗಿ ವಿದ್ಯೆ ಗೊತ್ತು.

ಗುಂಡ್ಲುಪೇಟೆ(ಏ.07): ಇಂಧನ ಸಚಿವ ಡಿ.ಕೆ. ಶಿವಕುಮಾರ್ ಗುಂಡ್ಲುಪೇಟೆ ವಿಧಾನಸಭೆ ಉಪಚುನಾವಣೆಯ ಬಹಿರಂಗ ಪ್ರಚಾರದ ಕೊನೆಯ ದಿನವಾದ ಇಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸಭಿಕರನ್ನು ಉದ್ದೇಶಿಸಿ ಮಾತನಾಡಿದ ಅವರು,ನಿಮಗೆಲ್ಲಾ ಮದ್ದು, ಗುಂಡು ಕೊಡ್ತೀವಿ. ನಾವ್ಯಾರೂ ಕ್ಷೇತ್ರವನ್ನು ಕೈ ಬಿಟ್ಟು ಹೋಗಲ್ಲ. ಕ್ಷೇತ್ರದ ಬಾರ್ಡರ್​​​​ಗಳಲ್ಲಿ ಠಿಕಾಣಿ ಹಾಕ್ತೀವಿ. ಎಲ್ಲಾ ಬೆಳವಣಿಗೆಗಳನ್ನು ಬಾರ್ಡರ್​​​​​​​​ನಲ್ಲಿ ಇದ್ದು ನೋಡ್ತಾ ಇರ್ತೀವಿ. ನಮಗೆ ಅವರಿಗಿಂತ ಚೆನ್ನಾಗಿ ವಿದ್ಯೆ ಗೊತ್ತು. ಆದರೆ ನಮ್ಮ ಸರ್ಕಾರ ಇರುವುದರಿಂದ ತಗ್ಗಿ ಬಗ್ಗಿ ನಡೆಯುತ್ತಾ ಇದ್ದೇವೆ' ಎಂದು ಸಚಿವ ಡಿ.ಕೆ. ಶಿವಕುಮಾರ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.