ಅಬಕಾರಿ ಸಚಿವರ ಉಚಿತ ಸಲಹೆ

ಮಂಗಳೂರು(ಸೆ.29): ಅಬಕಾರಿ ಸಚಿವ ಆರ್​.ಬಿ.ತಿಮ್ಮಾಪುರ ಅವರು ‘ಮದ್ಯಪಾನ ಮಾಡಿ, ಸರ್ಕಾರದ ಆದಾಯ ಹೆಚ್ಚಿಸಿ' ಎಂದು ಸಾರ್ವಜನಿಕರಿಗೆ ‘ಉಚಿತ’ ಸಲಹೆ ನೀಡಿದ್ದಾರೆ.

ಮಂಗಳೂರಿನಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಗಾಂಜಾದಿಂದ ಆರೋಗ್ಯ ಹಾಳು ಮಾಡಿಕೊಳ್ಳುವುಕ್ಕಿಂತ ಮದ್ಯಪಾನ ಮಾಡಿ ಅಬಕಾರಿಯಿಂದ ಸರ್ಕಾರದ ಬೊಕ್ಕಸ ತುಂಬಿಸುವ ಹೊಣೆ ನಮ್ಮದು. ಮದ್ಯಪಾನ ಮಾಡುವ ಸಂಸ್ಕೃತಿ ಇತ್ತೀಚಿನದ್ದು ಅಲ್ಲ. ದೇವಾನು ದೇವತೆಗಳೆಲ್ಲಾ ಮದ್ಯವನ್ನು ಸೇವಿಸುತ್ತಿದ್ದರು. ಮದ್ಯ ಸೇವಿಸೋದು ಒಳ್ಳೆಯದು' ಎಂದು ತಿಳಿಸಿದ್ದಾರೆ.