ಶುಂಠಿ ಕಣಗಳಲ್ಲಿ ಶುಂಠಿ ಸಂಸ್ಕರಿಸಲು ಗಂಧಕವನ್ನ ಅಕ್ರಮವಾಗಿ ಬಳಸುತ್ತಿರುವ ಬಗ್ಗೆ ಸುವರ್ಣ ನ್ಯೂಸ್ ಕವರ್'ಸ್ಟೋರಿ ತಂಡ ವರದಿ ಮಾಡಿತ್ತು. ಶುಂಟಿಗೆ ಗಂಧಕವನ್ನು ಹಾಕುವುದರಿಂದ ತನ್ನ ಔಷಧೀಯ ಗುಣವನ್ನು ಕಳೆದುಕೊಂಡು ವಿಷವಾಗಿ ಮಾರ್ಪಾಡಾಗುತ್ತೆ. ಅಲ್ಲದೆ ಗಂಧಕದ ಹೊಗೆಯನ್ನು ನಿರಂತರವಾಗಿ ಹಾಕುತ್ತಿರೋದ್ರಿಂದ ಪರಿಸರ ಹಾಳಾಗುತ್ತಿದೆ.

ಶಿವಮೊಗ್ಗ ಜಿಲ್ಲೆಯ ಸಾಗರ ಸೇರಿದಂತೆ ಅನೇಕ ತಾಲ್ಲೂಕುಗಳಲ್ಲಿರೋ ಶುಂಠಿ ಕಣಗಳಲ್ಲಿ ಶುಂಠಿ ಸಂಸ್ಕರಿಸಲು ಗಂಧಕವನ್ನ ಅಕ್ರಮವಾಗಿ ಬಳಸುತ್ತಿರುವ ಬಗ್ಗೆ ಸುವರ್ಣ ನ್ಯೂಸ್ ಕವರ್'ಸ್ಟೋರಿ ತಂಡ ವರದಿ ಮಾಡಿತ್ತು. ಶುಂಟಿಗೆ ಗಂಧಕವನ್ನು ಹಾಕುವುದರಿಂದ ತನ್ನ ಔಷಧೀಯ ಗುಣವನ್ನು ಕಳೆದುಕೊಂಡು ವಿಷವಾಗಿ ಮಾರ್ಪಾಡಾಗುತ್ತೆ. ಅಲ್ಲದೆ ಗಂಧಕದ ಹೊಗೆಯನ್ನು ನಿರಂತರವಾಗಿ ಹಾಕುತ್ತಿರೋದ್ರಿಂದ ಪರಿಸರ ಹಾಳಾಗುತ್ತಿದೆ. ಅಲ್ಲದೆ ಕಣದ ಸುತ್ತಮುತ್ತಲು ವಾಸಿಸೋ ಮಂದಿ ಶ್ವಾಸಕೋಶ ಸಂಬಂಧಿ ಕಾಯಿಲೆಯಿಂದ ನರಳುತ್ತಿದ್ದಾರೆ. ವರದಿಗೆ ಸ್ಪಂದಿಸಿದ ಆರೋಗ್ಯ ಸಚಿವ ರಮೇಶ್ ಕುಮಾರ್, ಈ ರೀತಿ ಆಹಾರಕ್ಕೆ ವಿಷ ಬೆರೆಸುವ ದಂಧೆಕೋರರ ವಿರುದ್ಧ ಕ್ರಮಕೈಗೊಳ್ಳುವ ಭರವಸೆ ನೀಡಿದ್ದಾರೆ.