ಬೆಳಗಾವಿಯಿಂದ ಸಂತೋಷ್ ಎಂಬುವರು ಕರೆ ಮಾಡಿ,  ಕಾವೇರಿ ನಗರ ಬಡಾವಣೆಯಲ್ಲಿ ಯಾವುದೇ ಅಭಿವೃದ್ಧಿಯಾಗಿಲ್ಲ. ಲೋಕಾಯುಕ್ತಕ್ಕೂ ದೂರು ನೀಡಿದ್ದು, ಅಭಿವೃದ್ಧಿಗೆ ಸೂಚಿಸಿದ್ದಾರೆ. ಆದರೂ ಅಧಿಕಾರಿಗಳು ಕ್ರಮಕೈಗೊಂಡಿಲ್ಲ  ಎಂದಾಗ,15 ದಿನಗಳೊಳಗೆ ಖುದ್ದು ತಾವೇ ಬಂದು ಪರಿಶೀಲಿಸೋದಾಗಿ ಸಚಿವರು ಭರವಸೆ ನೀಡಿದರು.

ಬೆಂಗಳೂರು(ಜೂ.25): ಹಲೋ ಮಿನಿಸ್ಟರ್.... ಸುವರ್ಣ ನ್ಯೂಸ್​​​​ನ ನೂತನ ಮತ್ತು ವಿಭಿನ್ನ ಪ್ರಯತ್ನಕ್ಕೆ ಈ ಬಾರಿಯೂ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಇವತ್ತು ಅತಿಥಿಯಾಗಿ ನಗರಾಭಿವೃದ್ಧಿ ಮತ್ತು ಹಜ್​ ಸಚಿವ ರೋಷನ್ ಬೇಗ್ ಆಗಮಿಸಿದ್ದರು. ಜನರು ಕೇಳಿದ ಪ್ರಶ್ನೆಗಳಿಗೆ ಸಚಿವರು ಮತ್ತು ಸಮಾಧಾನಕರ ಉತ್ತರ ನೀಡಿದರು.

ಬೆಳಗಾವಿಯಿಂದ ಸಂತೋಷ್ ಎಂಬುವರು ಕರೆ ಮಾಡಿ, ಕಾವೇರಿ ನಗರ ಬಡಾವಣೆಯಲ್ಲಿ ಯಾವುದೇ ಅಭಿವೃದ್ಧಿಯಾಗಿಲ್ಲ. ಲೋಕಾಯುಕ್ತಕ್ಕೂ ದೂರು ನೀಡಿದ್ದು, ಅಭಿವೃದ್ಧಿಗೆ ಸೂಚಿಸಿದ್ದಾರೆ. ಆದರೂ ಅಧಿಕಾರಿಗಳು ಕ್ರಮಕೈಗೊಂಡಿಲ್ಲ ಎಂದಾಗ,15 ದಿನಗಳೊಳಗೆ ಖುದ್ದು ತಾವೇ ಬಂದು ಪರಿಶೀಲಿಸೋದಾಗಿ ಸಚಿವರು ಭರವಸೆ ನೀಡಿದರು.

ಇನ್ನೂ SUDAದಿಂದ 2014ರಲ್ಲಿ ವಾಜಪೇಯಿ ಬಡಾವಣೆ ನಿವೇಶನ ಹಂಚಿಕೆಯಲ್ಲಿನ ಹಗರಣ ನಡೆದಿದ್ದನ್ನು ಸುವರ್ಣ ನ್ಯೂಸ್ ಬಹಿರಂಗ ಪಡಿಸಿತ್ತು. ಇದುವರೆಗೂ ಯಾಕೆ ಕ್ರಮ ಕೈಗೊಂಡಿಲ್ಲ ಎಂದು ಶಿವಮೊಗ್ಗದಿಂದ ಶ್ರೀಧರ್ ಎಂಬರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಈ ಬಗ್ಗೆ ಉನ್ನತಮಟ್ಟದ ತನಿಖೆ ನಡೀತಿದೆ, ವರದಿ ಬಳಿಕ ಕ್ರಮ ಕೈಗೊಳ್ಳೋ ಭರವಸೆ ನೀಡಿದರು.

ಇದಲ್ಲದೇ ಚಿಕ್ಕಮಗಳೂರಲ್ಲಿ ಭೂಮಿ ಕೊಟ್ಟವರಿಗೆ ಪರಿಹಾರ ಸಿಕ್ಕಿಲ್ಲ.. ಅರ್ಜಿದಾರರಿಗೆ ನಿವೇಶನವೂ ಹಂಚಿಕೆಯಾಗಿಲ್ಲ.. ಚಾಮರಾಜನಗರ ನಗರಾಭಿವೃದ್ಧಿ ಪ್ರಾಧಿಕಾರದಿಂದ 15 ವರ್ಷಗಳಿಂದ ಒಂದೇ ಒಂದು ನಿವೇಶನ ಹಂಚಿಕೆಯಾಗಿಲ್ಲ. ಹೀಗೆ ಹಲವು ದೂರುಗಳು ಬಂದವು. ಎಲ್ಲದಕ್ಕೂ ಸಮರ್ಪಕ ಉತ್ತರ ನೀಡಿದ ಸಚಿವರು, ತಮ್ಮ ಇಲಾಖೆಯಲ್ಲಿನ ಯೋಜನೆಗಳ ಬಗ್ಗೆಯೂ ವಿವರ ನೀಡಿದರು. ಅಲ್ಲದೇ ಸುವರ್ಣ ನ್ಯೂಸ್ ವಿಭಿನ್ನ ಕಾರ್ಯಕ್ರಮಕ್ಕೂ ಸಚಿವರು ಶ್ಲಾಘನೆ ವ್ಯಕ್ತಪಡಿಸಿದರು.