ಅಲ್ಲದೆ, ಕಲಬುರಗಿ ಜಿಲ್ಲೆಯಲ್ಲಿ 9.30 ಡಿ.ಸೆ., ವಿಜಯಪುರ ಜಿಲ್ಲೆಯಲ್ಲಿ 9.90 ಡಿಗ್ರಿ, ಧಾರವಾಡ ಜಿಲ್ಲೆಯಲ್ಲಿ 9.30 ಡಿ.ಸೆ. ನಷ್ಟು ಕನಿಷ್ಠ ತಾಪಮಾನ ದಾಖಲಾಗಿದೆ. ಇದರಿಂದ ಆ ಭಾಗದಲ್ಲಿ ತಾಪಮಾನ ಭಾರಿ ಕುಸಿತ ಕಂಡಿದ್ದು, ಮೈನಡುಗಿಸುವ ಚಳಿ ಆವರಿಸಿದೆ

ಬೆಂಗಳೂರು(ನ.13): ಮಳೆಯಿಂದ ತತ್ತರಿಸಿದ್ದ ರಾಜ್ಯದಲ್ಲಿ ಇದೀಗ ನಡುಗುವ ಸಮಯ. ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಉಷ್ಣಾಂಶ ಇಳಿಮುಖವಾಗಿದ್ದು ಬೀದರ್‌ನಲ್ಲಿ ಅತಿ ಹೆಚ್ಚು ಚಳಿ ದಾಖಲಾಗಿದೆ. ಭಾನುವಾರ ಬೆಳಗ್ಗೆ 8.30ಕ್ಕೆ ಅಂತ್ಯಗೊಂಡ ಸಮಯದಲ್ಲಿ ಬೀದರ್ ಸೇರಿದಂತೆ 4 ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನ ಒಂದಂಕಿಗೆ ಇಳಿದಿದೆ. ಈ ಪೈಕಿ ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕು ಹಲಬರ್ಗಾದಲ್ಲಿ ರಾಜ್ಯದಲ್ಲೇ ಅತಿ

ಕಡಿಮೆ 7.20 ಡಿ.ಸೆ. ತಾಪಮಾನ ದಾಖಲಾಗಿದೆ. ಅಲ್ಲದೆ, ಕಲಬುರಗಿ ಜಿಲ್ಲೆಯಲ್ಲಿ 9.30 ಡಿ.ಸೆ., ವಿಜಯಪುರ ಜಿಲ್ಲೆಯಲ್ಲಿ 9.90 ಡಿಗ್ರಿ, ಧಾರವಾಡ ಜಿಲ್ಲೆಯಲ್ಲಿ 9.30 ಡಿ.ಸೆ. ನಷ್ಟು ಕನಿಷ್ಠ ತಾಪಮಾನ ದಾಖಲಾಗಿದೆ. ಇದರಿಂದ ಆ ಭಾಗದಲ್ಲಿ ತಾಪಮಾನ ಭಾರಿ ಕುಸಿತ ಕಂಡಿದ್ದು, ಮೈನಡುಗಿಸುವ ಚಳಿ ಆವರಿಸಿದೆ. ರಾಜಧಾನಿ ಬೆಂಗಳೂರಿನಲ್ಲೂ ಕನಿಷ್ಠ ತಾಪಮಾನ 12.10 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.

ಮೈಸೂರು ಜಿಲ್ಲೆಯ ವಿವಿಧೆಡೆ 10 ಡಿ.ಸೆ., ರಾಯಚೂರು, ಬೆಳಗಾವಿ, ಶಿವಮೊಗ್ಗ, ಹಾಸನ, ಚಿಕ್ಕಮಗಳೂರು, ಬಾಗಲೋಟೆ, ಉತ್ತರ ಕನ್ನಡ, ಯಾದಗಿರಿಯ ವಿವಿಧೆಡೆ 11 ರಿಂದ 11.8 ಡಿ.ಸೆ, ಬೆಂಗಳೂರು ಗ್ರಾ., ತುಮಕೂರು, ಹಾವೇರಿ ಜಿಲ್ಲೆಗಳ ವಿವಿಧೆಡೆ 12 ರಿಂದ 12.60 ಡಿ.ಸೆ.ನಷ್ಟು ತಾಪಮಾನ ದಾಖಲಾಗಿದೆ. ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಅಧಿಕಾರಿಗಳ ಹೇಳುವ ಪ್ರಕಾರ, ನವೆಂಬರ್‌ನಲ್ಲಿ ಬೀದರ್ ಸೇರಿ ವಿವಿಧ ಜಿಲ್ಲೆಗಳಲ್ಲಿ ಕನಿಷ್ಠ ತಾಪಮಾನ ಏಕ ಸಂಖ್ಯೆಗೆ ಇಳಿಯುವುದು ಸಾಮಾನ್ಯ. ಆದರೆ, ಭಾನುವಾರ ದಾಖಲಾಗಿರುವ ತಾಪಮಾನ ದಾಖಲೆಯೇ ಎಂಬುದನ್ನು ಪರಿಶೀಲಿಸಬೇಕಿದೆ ಎಂದು ಹೇಳಿದ್ದಾರೆ