ವಿಮಾನದ ಮೂಲಕ ಸಿಂಪಡಿಸಿದ ರಾಸಾಯನಿಕದ ಪರಿಣಾಮ ಸುಮಾರು 46 ಜೇನುಗೂಡುಗಳು ಏಕಕಾಲದಲ್ಲಿ ನಾಶವಾಗಿವೆ.
ನವದೆಹಲಿ ( ಸೆ.14): ಇತ್ತೀಚೆಗೆ ಎಲ್ಲೆಡೆ ಕಾಣಿಸಿಕೊಂಡು ಭೀತಿ ಹುಟ್ಟಿಸಿದ್ದ 'ಝಿಕಾ' ಪರಿಣಾಮದಿಂದಾಗಿ ಜನ ತತ್ತರಿಸಿ ಹೋಗಿದ್ದರು. ಈ ಝಿಕಾ ವೈರಾಣುಗಳನ್ನು ನಾಶ ಪಡಿಸಲು ಸಿಂಪಡಿಸಿದ ಕೀಟನಾಶಕದ ಪರಿಣಾಮ ಮೂರು ಮಿಲಿಯನ್ ಜೇನು ನೊಣಗಳು ಸಾವನ್ನಪ್ಪಿದ ಸಂಗತಿ ದಕ್ಷಿಣ ಕೆರೋಲಿನಾ ದಲ್ಲಿ ನಡೆದಿದೆ. ವಿಮಾನದ ಮೂಲಕ ಸಿಂಪಡಿಸಿದ ರಾಸಾಯನಿಕದ ಪರಿಣಾಮ ಸುಮಾರು 46 ಜೇನುಗೂಡುಗಳು ಏಕಕಾಲದಲ್ಲಿ ನಾಶವಾಗಿವೆ.
ಯಾವುದೇ ಮುನ್ಸೂಚನೆ ಇಲ್ಲದೆ ಮತ್ತು ಯಾವ ಅಧಿಕೃತ ಸೂಚನೆಯನ್ನೂ ನೀಡದೆ ರಾಸಾಯನಿಕ ಸಿಂಪಡಿಸಿದುದರ ಪರಿಣಾಮ ಜೇನುಹುಳುಗಳನ್ನು ಸಂರಕ್ಷಿಸುವುದಕ್ಕಾಗಿ ಕೃತಕವಾಗಿ ತಯಾರಿಸಿದ್ದ 46 ಗೂಡುಗಳಲ್ಲಿನ ಜೇನು ಹುಳುಗಳು ನಾಶವಾಗಿವೆ. ಎಂದು ಜೇನು ಸಾಕಿದ ಚಾರ್ಲ್ಸ್ಟನ್ ಪೋಸ್ಟ್ ಎಂಬುವವರು ಬೇಸರ ವ್ಯಕ್ತ ಪಡಿಸಿದುದಾಗಿ ಝೀ ನ್ಯೂಸ್ ವರಧಿ ಮಾಡಿದೆ.
