ನೂರಾರು ಕೋಟಿ ಆಸ್ತಿ ಹೊಂದಿದ್ದ ವರು ವೈ‘ವೋಪೇತ ಜೀವನ ನಡೆಸುತ್ತಾ ಕಾಲ ಕಳೆಯೋದೇ ಹೆಚ್ಚು. ಅಂಥದ್ದರಲ್ಲಿ ಪಿತ್ತೋರ್'ಗಢದ ದಂಪತಿ ನೂರಾರು ಕೋಟಿ ರು. ಆಸ್ತಿ ಮತ್ತು 3 ವರ್ಷದ ಪುಟ್ಟ ಮಗುವನ್ನು ಬಿಟ್ಟು ಸನ್ಯಾಸದೀಕ್ಷೆ ಪಡೆಯಲು ಮುಂದಾಗಿದ್ದಾರೆ. ಕುಟುಂಬ ಸದಸ್ಯರ ಮನವಿ, ಕೋರಿಕೆ ಹೊರ ತಾಗಿಯೂ ಸುಮಿತ್ ಮತ್ತು ಅನಾಮಿಕ ದಂಪತಿ ಸೆ.23ಕ್ಕೆ ಜೈನ ಸನ್ಯಾಸಿಗಳಾಗಿ ದೀಕ್ಷೆ ಪಡೆಯಲು ನಿರ್ಧಸಿದ್ದಾರೆ.

ಭೋಪಾಲ್(ಸೆ.15): ನೂರಾರು ಕೋಟಿ ಆಸ್ತಿ ಹೊಂದಿದ್ದ ವರು ವೈ‘ವೋಪೇತ ಜೀವನ ನಡೆಸುತ್ತಾ ಕಾಲ ಕಳೆಯೋದೇ ಹೆಚ್ಚು. ಅಂಥದ್ದರಲ್ಲಿ ಪಿತ್ತೋರ್'ಗಢದ ದಂಪತಿ ನೂರಾರು ಕೋಟಿ ರು. ಆಸ್ತಿ ಮತ್ತು 3 ವರ್ಷದ ಪುಟ್ಟ ಮಗುವನ್ನು ಬಿಟ್ಟು ಸನ್ಯಾಸದೀಕ್ಷೆ ಪಡೆಯಲು ಮುಂದಾಗಿದ್ದಾರೆ. ಕುಟುಂಬ ಸದಸ್ಯರ ಮನವಿ, ಕೋರಿಕೆ ಹೊರ ತಾಗಿಯೂ ಸುಮಿತ್ ಮತ್ತು ಅನಾಮಿಕ ದಂಪತಿ ಸೆ.23ಕ್ಕೆ ಜೈನ ಸನ್ಯಾಸಿಗಳಾಗಿ ದೀಕ್ಷೆ ಪಡೆಯಲು ನಿರ್ಧಸಿದ್ದಾರೆ.

ಆತ್ಮಕಲ್ಯಾಣದ ಇಚ್ಛೆಯಿಂದ ಈ ನಿರ್ಧಾರ ಕೈಗೊಂಡಿರುವುದಾಗಿ ದಂಪತಿ ಹೇಳಿದ್ದಾರೆ. ಸುಮಿತ್ ರಾಠೋಡ್ (34) ನಿಮಚ್'ನ ಬಹುದೊಡ್ಡ ಉದ್ಯಮ ಕುಟುಂಬಕ್ಕೆ ಸೇರಿದವರು ಮತ್ತು ಲಂಡನ್'ನಲ್ಲಿ ಬಿಸಿನೆಸ್ ಡಿಪ್ಲೊಮಾ ಮಾಡಿದವರು. ಅವರ ಪತ್ನಿ ಅನಾಮಿಕ ಎಂಜಿನಿಯರಿಂಗ್ ಪದವೀಧರರು. ಈ ಜೋಡಿಯ ಮದುವೆ ನಾಲ್ಕು ವರ್ಷಗಳ ಹಿಂದೆ ನಡೆದಿತ್ತು. ‘ತಮ್ಮ ಮಗುವಿಗೆ ಆಗಿನ್ನು 8 ತಿಂಗಳು ತುಂಬಿದಾಗಲೇ ನಮಗೆ ಮನಸ್ಸಿನಲ್ಲಿ ಆತ್ಮಕಲ್ಯಾಣದ ಆಶಯ ಮೂಡಿತ್ತು. ಅಂದಿನಿಂದಲೂ ನಾವು ಬ್ರಹ್ಮಚರ್ಯೆ ಪಾಲಿಸಿಕೊಂಡು ಬಂದಿದ್ದೇವೆ. ತಮ್ಮ ಮಗಳು ಪುಣ್ಯಶೀಲಳು, ಆಕೆಯ ಆಗಮನದ ಬಳಿಕವೇ ತಮಗೆ ಆತ್ಮಕಲ್ಯಾಣದ ಇಚ್ಛೆಯುಂಟಾಗಿದೆ. ನಾವು ಈ ನಿರ್ಧಾರದಿಂದ ಹಿಂದೆ ಸರಿಯುವ ಸಾಧ್ಯತೆ ಇಲ್ಲವೇ ಇಲ್ಲ’ ಎಂದು ಹೇಳಿದ್ದಾರೆ.

ಲಂಡನ್ನಲ್ಲಿ ಬಿಸಿನೆಸ್ ಡಿಪ್ಲೋಮಾ ಪೂರ್ಣಗೊಳಿಸಿರುವ ಸುಮಿತ್, ಎರಡು ವರ್ಷ ಅಲ್ಲಿಯೇ ಉದ್ಯೋಗದಲ್ಲಿದ್ದರು. ಬಳಿಕ ತಮ್ಮ ತಾತನ ಆಶಯದಂತೆ ನಿಮಚ್'ಗೆ ಬಂದು ಫ್ಯಾಕ್ಟರಿ ಆರಂಭಿಸಿದ್ದರು. ಫ್ಯಾಕ್ಟರಿಯಲ್ಲಿ 100ಕ್ಕೂ ಅಧಿಕ ಮಂದಿ ಕೆಲಸ ಮಾಡುತ್ತಿದ್ದಾರೆ. ಇನ್ಫೋಸಿಸ್'ನಲ್ಲಿದ್ದ ಅವರ ಎಂಜಿಯರ್ ಸಹೋದರ ಕೂಡ ಉದ್ಯೋಗ ತೊರೆದು, ಉದ್ಯಮದಲ್ಲಿ ತೊಡಗಿಸಿಕೊಂಡಿದ್ದಾರೆ. ರಫ್ತು ಉದ್ಯಮ ವನ್ನೂ ಅವರು ಹೊಂದಿದ್ದಾರೆ.

ಅನಾಮಿಕ 10ನೇ, 12ನೇ ತರಗತಿಯಲ್ಲಿ ರರ್ಯಾಂಕ್ ಗಳಿಸಿದ್ದ ಪ್ರತಿಭಾವಂತೆ. ಬಳಿಕ ಎಂಜಿನಿಯರ್ ಆಗಿ, ವಾರ್ಷಿಕ 10 ಲಕ್ಷ ರು. ಪ್ಯಾಕೇಜ್'ನ ಉದ್ಯೋಗ ಹೊಂದಿದ್ದರು. ಆದರೆ, 2012ರಲ್ಲಿ ಮದುವೆ ನಿಶ್ಚಯವಾದ ಬಳಿಕ ಉದ್ಯೋಗ ತೊರೆದಿದ್ದರು.