ಲಕ್ನೋ(ಸೆ.25): ಭಾರತೀಯ ವಾಯುಪಡೆಯ ಮಿಗ್ 21 ತರಬೇತಿ ಯುದ್ಧ ವಿಮಾನ ಪತನವಾಗಿ, ಪೈಲೆಟ್’ಗಳು ಸುರಕ್ಷಿತವಾಗಿರುವ ಘಟನೆ ಮಧ್ಯಪ್ರದೇಶದ ಗ್ವಾಲಿಯರ್’ನಲ್ಲಿ ನಡೆದಿದೆ.  

ಅಪಾಯದ ಮುನ್ಸೂಚನೆ ದೊರೆಯುತ್ತಿದ್ದಂತೆ ತರಬೇತಿ ಯುದ್ಧ ವಿಮಾನದಲ್ಲಿದ್ದ ಇಬ್ಬರು ಪೈಲೆಟ್’ಗಳು  ಪ್ಯಾರಾಚೂಟ್ ಸಹಾಯದಿಂದ ವಿಮಾನದಿಂದ ಸುರಕ್ಷಿತವಾಗಿ ಹೊರ ಜಿಗಿದಿದ್ದಾರೆ.

ಇನ್ನು ವಿಮಾನ ಪತನಕ್ಕೆ ಸಂಬಂಧಿಸಿದಂತೆ ವಾಯುಸೇನೆ ತನಿಖೆಗೆ ಆದೇಶಿಸಿದ್ದು, ಸ್ಥಳೀಯರಿಂದ ರಕ್ಷಿಸಲ್ಪಟ್ಟ ಪೈಲೆಟ್’ಗಳನ್ನು ಸೇನಾ ಆಸ್ಪತ್ರೆಗೆ ದಾಖಲಿಸಿದೆ.

2016ರಿಂದ ಈ ವರೆಗೆ ಒಟ್ಟು 27 ವಿಮಾನಗಳು ಅಪಘಾತಕ್ಕೀಡಾಗಿದ್ದು, ತರಬೇತಿ ಸಮಯದಲ್ಲಿ ಮಿಗ್-21 ಯುದ್ಧ ವಿಮಾನಗಳು ಅಪಘಾತಕ್ಕೀಡಾಗುವುದು ಸಾಮಾನ್ಯ  ಸಂಗತಿಯಾಗಿದೆ.