ಫೆ.16ರಂದು ಬಜೆಟ್'ನಲ್ಲಿ ಇಂತಿಷ್ಟು ಹಣ ನಿಗದಿ ಮಾಡುವ ಭರವಸೆ ನಿಡುವ ಕಾರಣ ಪ್ರತಿಭಟೆನೆಯನ್ನು ವಾಪಸ್ ಪಡೆದಿದ್ದಾರೆ.

ಬೆಂಗಳೂರು(ಫೆ.09): ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದ ನಂತರ ಐದು ದಿನಗಳ ಪ್ರತಿಭಟನೆಯ ನಂತರ ಬಿಸಿಯೂಟ ಕಾರ್ಯಕರ್ತೆಯರು ಧರಣಿಯನ್ನು ಹಿಂಪಡೆದಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಶಕ್ತಿಭವನದಲ್ಲಿ ನಡೆಸಿದ ಸಭೆ ಸಫಲವಾಗಿದ್ದು, ಫೆ.16ರಂದು ಬಜೆಟ್'ನಲ್ಲಿ ಇಂತಿಷ್ಟು ಹಣ ನಿಗದಿ ಮಾಡುವ ಭರವಸೆ ನಿಡುವ ಕಾರಣ ಪ್ರತಿಭಟೆನೆಯನ್ನು ವಾಪಸ್ ಪಡೆದಿದ್ದಾರೆ. ಪ್ರತಿಭಟನಾ ಸ್ಥಳಕ್ಕೆ ಸಚಿವ ತನ್ವೀರ್ ಸೇಠ್ ಭೇಟಿ ನೀಡಿ ಮಾಹಿತಿ ತಿಳಿಸಿದ್ದಾರೆ.

ಬೆಂಗಳೂರಿನ ಫ್ರೀಡಂ ಪಾರ್ಕ್'ನಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಬಂದಿದ್ದ ಬಿಸಿಯೂಟ ಕಾರ್ಯಕರ್ತರು ನಾವು ಕನಿಷ್ಠ ವೇತನ ಕೇಳುತ್ತಿದ್ದೇವೆ. ನಮ್ಮ ಬೆವರಿನ ಶ್ರಮಕ್ಕೆ ಪ್ರತಿಫಲ ನೀಡಿ. ನೀವು ಒಮ್ಮೆ ಕಾಫಿ ಕುಡಿಯಲು ಖರ್ಚು ಮಾಡುವ ಹಣವಷ್ಟೇ ನಾವು ಕೇಳುತ್ತಿದ್ದೇವೆ’ ಎಂದು ನೋವು ತೋಡಿಕೊಂಡಿದ್ದರು.‘ಪ್ರತಿಭಟನೆಯಿಂದಾಗಿ ಶಾಲಾಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ತಪ್ಪಿತ್ತು.