ಮುಂಬೈನ ವಾಯು ಸೀಮೆಯಲ್ಲಿ ವಿಸ್ತಾರ ಮತ್ತು ಏರಿಂಡಿಯಾ ವಿಮಾನಗಳ ಭಾರೀ ಅಪಘಾತವೊಂದು ಸ್ವಲ್ಪದರಲ್ಲೇ ತಪ್ಪಿಹೋದ ಘಟನೆ ನಡೆದಿದೆ.
ಮುಂಬೈ: ಮುಂಬೈನ ವಾಯು ಸೀಮೆಯಲ್ಲಿ ವಿಸ್ತಾರ ಮತ್ತು ಏರಿಂಡಿಯಾ ವಿಮಾನಗಳ ಭಾರೀ ಅಪಘಾತವೊಂದು ಸ್ವಲ್ಪದರಲ್ಲೇ ತಪ್ಪಿಹೋದ ಘಟನೆ ನಡೆದಿದೆ.
ಫೆ.7ರಂದು 152 ಜನರನ್ನು ಹೊತ್ತ ವಿಸ್ತಾರ ಸಂಸ್ಥೆಯ ವಿಮಾನ ದೆಹಲಿಯಿಂದ ಪುಣೆಯತ್ತ ಹೊರಟಿತ್ತು. ಇದೇ ವೇಳೆ ವಿಸ್ತಾರ ವಿಮಾನಕ್ಕಿಂತ ಕೇವಲ 100 ಅಡಿ ದೂರದಲ್ಲೇ 109 ಪ್ರಯಾಣಿಕರನ್ನು ಹೊತ್ತ ಏರಿಂಡಿಯಾ ವಿಮಾನ ಕೂಡಾ ಬಂದಿತ್ತು.
ವಿಮಾನಗಳಲ್ಲಿ ಸ್ವಯಂಚಾಲಿತ ವ್ಯವಸ್ಥೆಯ ಎಚ್ಚರಿಕೆ ಪರಿಣಾಮ, ವಿಮಾನಗಳನ್ನು ತಕ್ಷಣವೇ ಸುರಕ್ಷಿತ ಪ್ರದೇಶಕ್ಕೆ ತೆಗೆದುಕೊಂಡು ಹೋಗಿ ಹಾರಾಟ ಮುಂದುವರೆಸಲಾಯಿತು. ಈ ಬಗ್ಗೆ ಇದೀಗ ವಿಮಾನ ಅಪಘಾತ ತನಿಖಾ ಬ್ಯೂರೋ ತನಿಖೆ ಆರಂಭಿಸಿದೆ.
