Asianet Suvarna News Asianet Suvarna News

KRSನಿಂದ ನೀರು ಬಿಡದಿದ್ದರೂ, ಮೆಟ್ಟೂರು ಡ್ಯಾಂ ಸೇರಿದ 14 ಸಾವಿರ ಕ್ಯುಸೆಕ್ ನೀರು!

Mettur Dam Filled With 14 thousand cusec water naturally

ಬೆಂಗಳೂರು(ಸೆ.27): KRS ನಿಂದ ತಮಿಳುನಾಡಿಗೆ ನೀರು ಬಿಡದಿದ್ದರೂ ಮೆಟ್ಟೂರು ಡ್ಯಾಂಗೆ ನೀರು ಸೇರಿದೆ!. ನಂಬಲಸಾಧ್ಯವಾದರೂ ಇದು ನಂಬಲೇಬೇಕಾದ ಸತ್ಯ. ಅಷ್ಟಕ್ಕೂ ತಮಿಳುನಾಡಿನ ಮೆಟ್ಟೂರು ಡ್ಯಾಂಗೆ ನೀರು ಸೇರಿದ್ದು ಹೇಗೆ ಇಲ್ಲಿದೆ ವಿವರ

ಅಂದ ಹಾಗೆ ಮೆಟ್ಟೂರು ಡ್ಯಾಂಗೆ ಸೇರಿದ ನೀರು ಕೆಆರ್​ಎಸ್​ನಿಂದ ಹರಿದ ನೀರಲ್ಲ ಬದಲಾಗಿ ಇದು ಮಳೆಯ ಎಫೆಕ್ಟ್. KRS ಹಾಗೂ ಬಿಳುಗುಂಡ್ಲು ಮಧ್ಯೆ ಸುರಿದ ಮಳೆಯ ಪರಿಣಾಮವಾಗಿ ಕೇವಲ ಐದಾರು ದಿನಗಳಲ್ಲಿ ಮೆಟ್ಟೂರು ಡ್ಯಾಂಗೆ ಸ್ವಾಭಾವಿಕವಾಗಿಯೇ 14 ಸಾವಿರ ಕ್ಯುಸೆಕ್ ನೀರು ಸೇರಿದೆ.

ಬಿಳಿಗುಂಡ್ಲುವಿನಲ್ಲಿ ದಾಖಲಾದ ನೀರಿನ ಲೆಕ್ಕ..!

-ಸೆ. 21 ರಂದು - 5 ಸಾವಿರದ 882 ಕ್ಯೂಸೆಕ್‌

-ಸೆ. 22 ರಂದು - 3 ಸಾವಿರದ 42 ಕ್ಯೂಸೆಕ್‌

-ಸೆ. 23 ರಂದು - 2 ಸಾವಿರದ 496 ಕ್ಯೂಸೆಕ್‌

-ಸೆ. 24 ರಂದು - ಸಾವಿರದ 590 ಕ್ಯೂಸೆಕ್‌

-ಸೆ. 25 ರಂದು - ಸಾವಿರದ 369 ಕ್ಯೂಸೆಕ್‌

-ಸೆ. 26 ರಂದು - 6 ರಿಂದ 7 ಸಾವಿರ ಕ್ಯೂಸೆಕ್‌

ಒಟ್ಟಾಗಿ ಕಾವೇರಿ ವಿವಾದ ನಡೆಯುತ್ತಿದ್ದ ಸಂದರ್ಭದಲ್ಲೇ ಕೆಆರ್​ಎಸ್, ಬಿಳಿಗುಂಡ್ಲು ಮಧ್ಯೆ ಅನಿರೀಕ್ಷಿತವಾಗಿ ಸುರಿದ ಮಳೆಯ ಪರಿಣಾಮದಿಂದ 14 ಸಾವಿರ ಕ್ಯುಸೆಕ್ ನೀರು ತಮಿಳುನಾಡು ಪಾಲಾಗಿದೆ.

Follow Us:
Download App:
  • android
  • ios