ಕೊಚ್ಚಿನ್[ಜು. 10]  ಕೇರಳದ ಪ್ರಸಿದ್ಧ ಮತ್ತು ಜನರ ಪ್ರೀತಿಗೆ ಪಾತ್ರವಾಗಿರುವ ಭಾರತಪೂಜಾ ನದಿಯನ್ನು ಅಲ್ಲಿನ ಜನರು ಪುನರುಜ್ಜೀವನಗೊಳಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ.

ಹಿರಿಯ ಇಂಜಿನಿಯರ್ ಶ್ರೀಧರನ್ ಅವರನ್ನು ಸ್ಥಳೀಯರು ಭೇಟಿ ಮಾಡಿ ನದಿ ಸಂರಕ್ಷಣೆ ಹೇಗೆ ಸಾಧ್ಯ ಎಂಬುದರ ಬಗ್ಗೆ ವಿವರವಾದ ಚರ್ಚೆ ಮಾಡಲಿದ್ದಾರೆ. ಶನಿವಾರ ಸಭೆ ಹಮ್ಮಿಕೊಳ್ಳಲಾಗಿದ್ದು ಮಾಜಿ ಡಿಜಿಪಿ ಹೋರ್ಮಿಸ್ ಥಕರ್ನ್ ಉದ್ಘಾಟನೆ ಮಾಡಲಿದ್ದಾರೆ.

ಭರತಪೂಜಾ ನದಿ ಸಂರಕ್ಷಣೆ ಸ್ನೇಹಿತರು ಮತ್ತು ಕಾರ್ಯಕರ್ತರು. ನದಿಯನ್ನು ಹೇಗೆ ಕಾಪಾಡಬೇಕು? ಸಂರಕ್ಷಣೆಗೆ ಯಾವ ಕ್ರಮ ತೆಗೆದುಕೊಳ್ಳಬೇಕು? ಎಂಬೆಲ್ಲ ವಿಚಾರಗಳು ಶನಿವಾರದ ಸಭೆಯಲ್ಲಿ ಚರ್ಚೆಯಾಗಲಿವೆ.

ಜಲಪಾತ ಮಧ್ಯದಲ್ಲಿ ಸಿಕ್ಕಿಕೊಂಡವರು ಬದುಕಿ ಬಂದ ರೋಚಕ ಕತೆ- ವಿಡಿಯೋ ವೈರಲ್

ನದಿ ವ್ಯಾಪ್ತಿಗೆ ಬರುವ 131 ಗ್ರಾಮ ಪಂಚಾಯಿತಿಯ ಜನರು ಇದಕ್ಕೆ ಕೈ ಜೋಡಿಸುತ್ತಿದ್ದಾರೆ. ನದಿ ತ್ಯಾಜ್ಯಗಳ ಡಂಪಿಂಗ್ ತಾಣವಾಗಿ ಬದಲಾಗಿದೆ.  ಹತ್ತಿರದಲ್ಲಿರುವ ಗಣಿ ಮತ್ತು ಕೈಗಾರಿಕೆಗಳನ್ನು ಸ್ಥಳಾಂತರ ಮಾಡಬೇಕಿದೆ ಎಂದು ಶ್ರೀಧರನ್ ಅಭಿಪ್ರಾಯ ಪಟ್ಟಿದ್ದಾರೆ.

ಕೇರಳದ ಪಲಾಕ್ಕಾಡ್, ತ್ರಿಶೂರ್ ಮತ್ತು ಮಲಪ್ಪುರಂ ಜಿಲ್ಲೆಗಳಲ್ಲಿ ಹರಿಯುವ ನದಿ ಅನೇಕ ಜೀವ ಸೆಲೆಗಳ ಆಗರವಾಗಿದ್ದು ಆಧುನಿಕತೆ ಭರಾಟೆ ಮತ್ತು ಪ್ರವಾಸೋದ್ಯಮ ಕರಿನೆರಳಿಗೆ ಸಿಕ್ಕಿ ಮಾಲಿನ್ಯದ ತಾಣವಾಗಿ ಬದಲಾಗಿದೆ.