ನಾಳೆ ತಡವಾಗಲಿದೆ ಮೆಟ್ರೋ ಸಂಚಾರ

First Published 10, Mar 2018, 7:54 AM IST
Metro Train Delay Tomorrow
Highlights

ನಮ್ಮ ಮೆಟ್ರೋ ಮಾರ್ಗದ ರೈಲು ಹಳಿ ನಿರ್ವಹಣೆಯ ಕಾರಣದಿಂದ ಮಾ. 10ರ (ಶನಿವಾರ) ರಾತ್ರಿ ಸುಮಾರು 45 ನಿಮಿಷಗಳ ಮುಂಚಿತವಾಗಿ ರೈಲುಗಳ ಸಂಚಾರ ಸ್ಥಗಿತಗೊಳ್ಳಲಿದೆ.

ಬೆಂಗಳೂರು: ನಮ್ಮ ಮೆಟ್ರೋ ಮಾರ್ಗದ ರೈಲು ಹಳಿ ನಿರ್ವಹಣೆಯ ಕಾರಣದಿಂದ ಮಾ. 10ರ (ಶನಿವಾರ) ರಾತ್ರಿ ಸುಮಾರು 45 ನಿಮಿಷಗಳ ಮುಂಚಿತವಾಗಿ ರೈಲುಗಳ ಸಂಚಾರ ಸ್ಥಗಿತಗೊಳ್ಳಲಿದೆ.

ನಾಗಸಂದ್ರ, ಯಲಚೇನಹಳ್ಳಿ, ಬೈಯಪ್ಪನಹಳ್ಳಿ ಮತ್ತು ಮೈಸೂರು ರಸ್ತೆ ಟರ್ಮಿನಲ್ ನಿಲ್ದಾಣಗಳಿಂದ ಮೆಟ್ರೋ ಸಂಚಾರವನ್ನು ರಾತ್ರಿ 11 ಗಂಟೆಯ ಬದಲಾಗಿ ರಾತ್ರಿ 10.15ಕ್ಕೆ ಕೊನೆಯ ರೈಲು ಸಂಚರಿಸಲಿದೆ.

ನೇರಳೆ ಮತ್ತು ಹಸಿರು ಮಾರ್ಗಗಳಲ್ಲಿನ ವಾಣಿಜ್ಯ ಕಾರ್ಯಾಚರಣೆ 45 ನಿಮಿಷಗಳ ಮುಂಚಿತವಾಗಿ ಸ್ಥಗಿತಗೊಳ್ಳಲಿದೆ. ಅಲ್ಲದೆ, ಮಾ.11ರಂದು (ಭಾನುವಾರ) ಬೆಳಗ್ಗೆ 8ರ ಬದಲಿಗೆ 10.30 ರಿಂದ ಟರ್ಮಿನಲ್ ನಿಲ್ದಾಣಗಳಿಂದ ಸಂಚಾರ ಪ್ರಾರಂಭಿಸಲಾಗುವುದು. ಈ ಹಿನ್ನೆಲೆಯಲ್ಲಿ ಮೆಟ್ರೋ ಸಂಚಾರದಲ್ಲಿನ ಸಮಯದ ಬದಲಾವಣೆಗೆ ಪ್ರಯಾಣಿಕರು ಸಹಕರಿಸಬೇಕು ಎಂದು ಬಿಎಂಆರ್‌ಸಿಎಲ್‌ನ ವ್ಯವಸ್ಥಾಪಕ ನಿರ್ದೇಶಕ ಮಹೇಂದ್ರ ಜೈನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

loader