ಬೆಂಗಳೂರು (ಡಿ.24): ಕ್ರಿಸ್ಮಸ್​ ಹಬ್ಬ ಹಾಗೂ ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಮೆಟ್ರೋ ಸಂಚಾರ ಅವಧಿಯನ್ನು ವಿಸ್ತರಿಸಲಾಗಿದೆ.

ಕ್ರಿಸ್ಮಸ್​​​​​ ಹಿನ್ನೆಲೆಯಲ್ಲಿ ಇಂದು, ನಾಳೆ ಸಂಚಾರ ಅವಧಿ ವಿಸ್ತರಣೆ ಮಾಡಲಾಗಿದ್ದು ನಾಳೆ ರಾತ್ರಿ 1ಗಂಟೆವರೆಗೆ ಮೆಟ್ರೋ ಸಂಚಾರವಿಲಿದೆ.

ನಿತ್ಯ ಬೆಳಗ್ಗೆ 6 ರಿಂದ ರಾತ್ರಿ 11ರವರೆಗೆ ಸಂಚರಿಸುತ್ತಿದ್ದ ಮೆಟ್ರೋ ಅವಧಿಯನ್ನು ಹೊಸ ವರ್ಷಾಚರಣೆಯಂದೂ ವಿಸ್ತರಿಸಲಾಗಿದೆ.   ಡಿ. 31, ಜ. 1 ರಂದು ರಾತ್ರಿ 2 ಗಂಟೆವರೆಗೂ ಮೆಟ್ರೋ ಸಂಚಾರವಿರಲಿದೆ.