ನವದೆಹಲಿ, [ನ.02]: #ಮೀಟೂ ಅಭಿಯಾನದ ಮೂಲಕ ಈಗಾಗಲೇ  'ಲಿಪ್‌ಸ್ಟಿಕ್‌ ಅಂಡರ್‌ ಮೈ ಬುರ್ಖಾ' ಚಿತ್ರದ ನಿರ್ಮಾಪಕ ಸಾಜಿದ್ ಖಾನ್ ಅಸಲಿಯತ್ತು ಈಗಾಗಲೇ ಬಹಿರಂಗವಾಗಿದೆ. 

ಸಾಜಿದ್ ಖಾನ್ ಕರಾಳ ಮುಖವನ್ನ ನಟಿ ಸಲೋನಿ ಛೋಪ್ರಾ, ಪತ್ರಕರ್ತೆ ಕರಿಷ್ಮಾ ಉಪಾಧ್ಯಾಯ ಹಾಗೂ ಮಾಡೆಲ್ ಕಮ್ ನಟಿ ರೇಚಲ್ ವೈಟ್ ಬಯಲು ಮಾಡಿದ್ದರು, 

ಇದೀಗ ಮತ್ತೋರ್ವ ನಟಿ  ಆಹಾನಾ ಕುಮ್ರಾ ಅವರು ನಿರ್ದೇಶಕ ಸಾಜಿದ್ ಖಾನ್ ನ ಮತ್ತೊಂದು ಮುಖವಾಡವನ್ನ ಬಟಾಬಯಲು ಮಾಡಿದ್ದಾರೆ. ಸಾಜಿದ್ ಖಾನ್ ಅವರಿಂದ ತನಗಾದ ಲೈಂಗಿಕ ಕಿರುಕುಳ ಬಗ್ಗೆ ಆಹಾನಾ ಕುಮ್ರಾ ಬಿಚ್ಚಿಟ್ಟಿದ್ದಾರೆ. 

'ಲಿಪ್‌ಸ್ಟಿಕ್‌ ಅಂಡರ್‌ ಮೈ ಬುರ್ಖಾ' ಚಿತ್ರಕ್ಕೆ ಸಂಬಂಧಿದಂತೆ ಸಾಜಿದ್ ಖಾನ್ ಅವರ ಮನೆಯಲ್ಲಿ ಸಭೆ ನಡೆದಿತ್ತು. ಈ ವೇಳೆ ಅವರು ನನ್ನ ಜೊತೆ ಅಸಭ್ಯವಾಗಿ ಮಾತನಾಡಿದ್ದಾರೆ.

ಫಿಸಿಕಲ್ ಆಗಿ ಲೈಂಗಿಕ ದೌರ್ಜನ್ಯ ನಡೆಸಿಲ್ಲ. ಆದ್ರೆ, ಲೈಂಗಿಕ ಕ್ರಿಯೆಗೆ ಪ್ರಚೋಧಿಸುವ ಮಾತುಗಳನ್ನಾಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಅಷ್ಟೇ ಅಲ್ಲದೇ  ಶ್ವಾನದ ಜೊತೆ ಸೆಕ್ಸ್ ಮಾಡಿದ್ರೆ 100 ಕೋಟಿ ರು. ನೀಡುವುದಾಗಿ ನೇರವಾಗಿ ನನಗೆ ಹೇಳಿದ್ದಾರೆ ಎಂದು ಬಾಂಬ್ ಸಿಡಿಸಿದ್ದಾರೆ.