Asianet Suvarna News Asianet Suvarna News

ವಿವಾದದಲ್ಲಿ ತಮಿಳು ಚಿತ್ರ; ಬಿಜೆಪಿ ಕೆಂಗಣ್ಣಿಗೆ ‘ಮರ್ಸಲ್’

ಬುಧವಾರ ತೆರೆ ಕಂಡಿರುವ ತಮಿಳು ಚಿತ್ರರಂಗದ ಪ್ರಸಿದ್ಧ ನಟ ವಿಜಯ್ ಅವರ ‘ಮರ್ಸಲ್’ ಸಿನಿಮಾದಲ್ಲಿ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಕಾರ್ಯಕ್ರಮಗಳಾದ ಜಿಎಸ್‌ಟಿ ಹಾಗೂ ಡಿಜಿಟಲ್ ಇಂಡಿಯಾ ಬಗ್ಗೆ ಲೇವಡಿ ಮಾಡಿರುವುದು ವಿವಾದಕ್ಕೆ ಕಾರಣವಾಗಿದೆ.

Mersal Draws Flak From BJP Over GST

ಚೆನ್ನೈ: ಬುಧವಾರ ತೆರೆ ಕಂಡಿರುವ ತಮಿಳು ಚಿತ್ರರಂಗದ ಪ್ರಸಿದ್ಧ ನಟ ವಿಜಯ್ ಅವರ ‘ಮರ್ಸಲ್’ ಸಿನಿಮಾದಲ್ಲಿ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಕಾರ್ಯಕ್ರಮಗಳಾದ ಜಿಎಸ್‌ಟಿ ಹಾಗೂ ಡಿಜಿಟಲ್ ಇಂಡಿಯಾ ಬಗ್ಗೆ ಲೇವಡಿ ಮಾಡಿರುವುದು ವಿವಾದಕ್ಕೆ ಕಾರಣವಾಗಿದೆ.

‘ಸಿಂಗಾಪುರದಲ್ಲಿ ಕೇವಲ ಶೇ.7 ರಷ್ಟು ಜಿಎಸ್‌ಟಿ ವಸೂಲಿ ಮಾಡಿದರೂ ಜನತೆಗೆ ಉಚಿತ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತದೆ. ಆದರೆ ಭಾರತದಲ್ಲಿ ಶೇ.28 ಜಿಎಸ್‌ಟಿ ವಿಧಿಸುತ್ತಿದ್ದರೂ ಉಚಿತ ಚಿಕಿತ್ಸೆ ಸಿಗುತ್ತಿಲ್ಲ’ ಎಂದು ನಾಯಕ ನಟ ವಿಜಯ್ ಕ್ಲೈಮ್ಯಾಕ್ಸ್ ದೃಶ್ಯವೊಂದರಲ್ಲಿ ಡೈಲಾಗ್ ಹೊಡೆಯುತ್ತಾರೆ. ಇದೇ ಚಿತ್ರದ ಒಂದು ದೃಶ್ಯದಲ್ಲಿ ಹಾಸ್ಯ ನಟ ವಡಿವೇಲು ಡಿಜಿಟಲ್ ಇಂಡಿಯಾ ಯೋಜನೆ ಬಗ್ಗೆ ನಗೆಬುಗ್ಗೆ ಹಾರಿಸುತ್ತಾರೆ. ಇದು ತಮಿಳುನಾಡಿನ ಬಿಜೆಪಿ ಆಕ್ಷೇಪಕ್ಕೆ ಕಾರಣವಾಗಿದೆ.

ಜಿಎಸ್‌ಟಿ ಹಾಗೂ ಡಿಜಿಟಲ್ ಇಂಡಿಯಾ ಬಗ್ಗೆ ತಪ್ಪು ಕಲ್ಪನೆ ಮೂಡಿಸುವ ದೃಶ್ಯಗಳನ್ನು ತೆಗೆದುಹಾಕಬೇಕು ಎಂದು ತಮಿಳುನಾಡು ಬಿಜೆಪಿ ಅಧ್ಯಕ್ಷ ತಮಿಳುಸಾಯ್ ಸೌಂದರರಾಜನ್ ಆಗ್ರಹಿಸಿದ್ದಾರೆ.

 

Follow Us:
Download App:
  • android
  • ios