Asianet Suvarna News Asianet Suvarna News

ಒಂದಾದ ಅಣ್ಣಾ ಡಿಎಂಕೆ ಬಣ: ಉಪ ಮುಖ್ಯಮಂತ್ರಿಯಾಗಿ ಪನ್ನೀರ್'ಸೆಲ್ವಂ

ರಾಜ್ಯಪಾಲರಾದ ಸಿ.ಹೆಚ್. ವಿದ್ಯಾಸಾಗರ್ ಅವರು ಪನ್ನೀರ್'ಸೆಲ್ವಂ ಅವರನ್ನು ಒಳಗೊಂಡು ಅವರ  ಬಣದ ಮೂವರನ್ನು ಸಚಿವರನ್ನಾಗಿ ನೇಮಿಸಿದ್ದಾರೆ.

Merger Done OPS Is Deputy Chief Minister

ಚೆನ್ನೈ(ಆ.21): ಹಲವು ತಿಂಗಳಿಂದ ಆರೋಪ ಪ್ರತ್ಯಾರೋಪಗಳ ನಂತರ 2 ಬಣಗಳಾಗಿದ್ದ ತಮಿಳುನಾಡಿನ ಆಡಳಿತರೂಢ ಪಕ್ಷ ಅಣ್ಣಾ ಡಿಎಂಕೆ ಕೊನೆಗೂ ಒಂದಾಗಿದೆ. ಉಪಮುಖ್ಯಮಂತ್ರಿಯಾಗಿ ಮಾಜಿ ಮುಖ್ಯಮಂತ್ರಿ ಒ.ಪನ್ನೀರ್'ಸೆಲ್ವಂ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

ಮಾಜಿ ಮುಖ್ಯಮಂತ್ರಿ ಜಯಲಲಿತಾ ಸಾವಿನ ನಂತರ ಶಶಿಕಲಾ ಹಾಗೂ ಒ. ಪನ್ನೀರ್'ಸೆಲ್ವಂ 2 ಬಣಗಳಾಗಿ ಬೇರ್ಪಟ್ಟಿದ್ದವು. ಶಶಿಕಲಾ ಅಕ್ರಮ ಆಸ್ತಿ ಪ್ರಕರಣದಲ್ಲಿ 4 ವರ್ಷ ಜೈಲು ಶಿಕ್ಷೆಗೆ ಒಳಗಾದ ನಂತರ ತಮ್ಮ ಬಣದಿಂದ ಇ.ಪಳಿನಿಸ್ವಾಮಿಯನ್ನು ಮುಖ್ಯಮಂತ್ರಿಯನ್ನಾಗಿ ನೇಮಿಸಿ ಪನ್ನೀರ್ ಸೆಲ್ವಂ ಅವರನ್ನು ಒಳಗೊಂಡು ಹಲವರನ್ನು ಉಚ್ಚಾಟಿಸಿದ್ದರು.

ರಾಜ್ಯಪಾಲರಾದ ಸಿ.ಹೆಚ್. ವಿದ್ಯಾಸಾಗರ್ ಅವರು ಪನ್ನೀರ್'ಸೆಲ್ವಂ ಅವರನ್ನು ಒಳಗೊಂಡು ಅವರ  ಬಣದ ಮೂವರನ್ನು ಸಚಿವರನ್ನಾಗಿ ನೇಮಿಸಿದ್ದಾರೆ. 'ಹಿಂದಿನ ಎಲ್ಲ ಭಿನ್ನಾಭಿಪ್ರಾಯವನ್ನು ಮರೆತು ತಾವು ಅಮ್ಮನ ಮಕ್ಕಳಾಗಿ ಸೋದರರಾಗಿ ಇರುತ್ತೇವೆ' ಎಂದು ಪನ್ನೀ'ರ್ ಸೆಲ್ವಂ ತಿಳಿಸಿದ್ದಾರೆ.

Follow Us:
Download App:
  • android
  • ios