ಮೇಲುಕೋಟೆ ಅರ್ಚಕರ ಗಲಾಟೆ ಸದ್ಯ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಭಾಷ್ಯಂ ಸ್ವಾಮೀಜಿ ಸೇರಿ ಮೂವರ ವಿರುದ್ಧ ಮೇಲುಕೋಟೆ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಮಂಡ್ಯ (ಡಿ.14): ಮೇಲುಕೋಟೆ ಅರ್ಚಕರ ಗಲಾಟೆ ಸದ್ಯ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಭಾಷ್ಯಂ ಸ್ವಾಮೀಜಿ ಸೇರಿ ಮೂವರ ವಿರುದ್ಧ ಮೇಲುಕೋಟೆ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.
ಯೋಗ ನರಸಿಂಹಸ್ವಾಮಿ ದೇವಸ್ಥಾನದ ಪೂಜೆ ವಿಚಾರವಾಗಿ ಅರ್ಚಕರ ನಡುವೆ ಗಲಾಟೆ ನಡೆದಿತ್ತು.. ಅರ್ಚಕರಾದ ನಾರಾಯಣ ಭಟ್ ಮತ್ತು ಭಾಷ್ಯಂ ಸ್ವಾಮೀಜಿ ಮತ್ತು ಬೆಂಬಲಿಗರ ನಡುವೆ ಜಟಾಪಟಿ ನಡೆದಿದ್ದು ಸದ್ಯ ಗಲಾಟೆ ವಿಚಾರ ಠಾಣೆ ಮೆಟ್ಟಿಲೇರಿದೆ. ಹಲ್ಲೆ, ಅವಾಚ್ಯ ಶಬ್ದಗಳಿಂದ ನಿಂದನೆ, ಕೊಲೆ ಬೆದರಿಕೆ ಆರೋಪದಡಿ ಎಫ್ಐಆರ್ ದಾಖಲಾಗಿದೆ. ಡಿಸೆಂಬರ್ 11ರಂದು ರಾತ್ರಿ ಯೋಗಾ ನರಸಿಂಹ ದೇವಾಲಯದಲ್ಲಿ ಪೂಜೆ ವಿಚಾರವಾಗಿ ಗಲಾಟೆ ನಡೆದಿತ್ತು.. ಪರಿಣಾಮ ಪುರಾತನ ಲಕ್ಷ್ಮಿ ನರಸಿಂಹ ದೇವಾಲಯದಲ್ಲಿ ಪೂಜಾ ಕೈಂಕರ್ಯ ನಿಂತೋಗಿತ್ತು. ಕಳೆದ 3 ದಿನಗಳಿಂದ ಗರ್ಭಗುಡಿಗೆ ಅರ್ಚಕ ಬೀಗ ಹಾಕಲಾಗಿದ್ದು ಭಕ್ತರು ಹಾಗೂ ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ.
