7 ದಿನ ನಡೆಯಲಿದೆ ಸ್ಯಾಂಡಲ್'ವುಡ್ ತಾರಾ ಜೋಡಿಯ ಮದುವೆ ಸಂಭ್ರಮ

Meghana Raj and Chiranjeevi Sarja set to wed on May 2
Highlights

ಏ.25 ಹಾಗೂ 26 ರಂದು ಮೇಘನಾರಾಜ್ ಮನೆಯಂಗಳದಲ್ಲಿ ಅರಿಶಿನ ಶಾಸ್ತ್ರ ಹಾಗೂ ಬಳೆ ಶಾಸ್ತ್ರ ನಡೆಯಲಿದೆ. ಏ.27 ಮತ್ತು 28ರಂದು ಎರಡೂ ಮನೆಗಳಲ್ಲಿ ಪೂಜಾ ಕಾರ್ಯಗಳು ನಡೆಯಲಿದೆ. ಮೇಘನಾ ತಾಯಿ ಪ್ರಮಿಳಾ ಜೋಷಾಯ್ ಕ್ರೈಸ್ತ ಸಮುದಾಯದವರಾದ ಕಾರಣ ಏ.29ರಂದು ಕೋರಮಂಗಲದ ಸೇಂಟ್ ಆಂಟನಿ ಚರ್ಚ್'ನಲ್ಲಿ ಕ್ಯಾಥೋಲಿಕ್ ಸಂಪ್ರದಾಯದಂತೆ ವಿವಾಹ ನೆರವೇರಲಿದೆ. 

ಸ್ಯಾಂಡಲ್'ವುಡ್ ತಾರಾ ಜೋಡಿ ಚಿರಂಜೀವಿ ಸರ್ಜಾ ಹಾಗೂ ಮೇಘನಾ ರಾಜ್ ಮದುವೆ ನಾಳೆಯಿಂದ ಅದ್ಧೂರಿಯಾಗಿ ನಡೆಯಲಿದೆ. ಮದುವೆ ಸಂಭ್ರಮದಲ್ಲಿ ಇಡೀ ಚಿತ್ರೋದ್ಯಮವೆ ಪಾಲ್ಗೊಳ್ಳಲಿದೆ. ವಿವಿಧ ರೀತಿಯಲ್ಲಿ ವಿವಾಹ ಸಂಪ್ರದಾಯಗಳು ನೆರವೇರಲಿದೆ.

ಏ.25 ಹಾಗೂ 26 ರಂದು ಮೇಘನಾರಾಜ್ ಮನೆಯಂಗಳದಲ್ಲಿ ಅರಿಶಿನ ಶಾಸ್ತ್ರ ಹಾಗೂ ಬಳೆ ಶಾಸ್ತ್ರ ನಡೆಯಲಿದೆ. ಏ.27 ಮತ್ತು 28ರಂದು ಎರಡೂ ಮನೆಗಳಲ್ಲಿ ಪೂಜಾ ಕಾರ್ಯಗಳು ನಡೆಯಲಿದೆ. ಮೇಘನಾ ತಾಯಿ ಪ್ರಮಿಳಾ ಜೋಷಾಯ್ ಕ್ರೈಸ್ತ ಸಮುದಾಯದವರಾದ ಕಾರಣ ಏ.29ರಂದು ಕೋರಮಂಗಲದ ಸೇಂಟ್ ಆಂಟನಿ ಚರ್ಚ್'ನಲ್ಲಿ ಕ್ಯಾಥೋಲಿಕ್ ಸಂಪ್ರದಾಯದಂತೆ ವಿವಾಹ ನೆರವೇರಲಿದೆ. ವಿವಾಹದ ನಂತರ ಚರ್ಚ್'ನಲ್ಲಿಯೇ ಮೆಹಂದಿ ಹಾಗೂ ಸಂಗೀತ ಕಾರ್ಯಕ್ರಮಗಳು ಮನರಂಜಿಸಲಿವೆ.
ಏ.30 ರಂದು ವರಪೂಜೆ ಕಾರ್ಯಕ್ರಮ ಹಾಗೂ ಮೇ.1ರಂದು ಎರಡೂ ಕುಟುಂಬಗಳಲ್ಲಿ ಚಪ್ಪರ ಶಾಸ್ತ್ರ ಅಂತಿಮವಾಗಿ ಮೇ.2ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ದೂರಿ ಮುಹೂರ್ತ ಜರುಗಲಿದೆ. ಇಲ್ಲಿ ಗಣ್ಯಾತಿಗಣ್ಯರು ಪಾಲ್ಗೊಳ್ಳಲಿದ್ದಾರೆ.

loader