ಹೆಸರಿನಲ್ಲಿ ಏನಿದೆ ಅಂತೀರಾ?. ಇದೆ. ಫೆ. 27ರಂದು ನಡೆಯಲಿರುವ ಮೇಘಾಲಯ ವಿಧಾನಸಭಾ ಚುನಾವಣೆಯಲ್ಲಿ ಇಟಲಿ, ಅರ್ಜೆಂಟಿನಾ, ಸ್ವೀಡನ್‌ ಮತ್ತು ಇಂಡೋನೇಷ್ಯಾ ಮತದಾನ ಮಾಡಲಿದ್ದಾರೆ!

ಶಿಲಾಂಗ್‌: ಹೆಸರಿನಲ್ಲಿ ಏನಿದೆ ಅಂತೀರಾ?. ಇದೆ. ಫೆ. 27ರಂದು ನಡೆಯಲಿರುವ ಮೇಘಾಲಯ ವಿಧಾನಸಭಾ ಚುನಾವಣೆಯಲ್ಲಿ ಇಟಲಿ, ಅರ್ಜೆಂಟಿನಾ, ಸ್ವೀಡನ್‌ ಮತ್ತು ಇಂಡೋನೇಷ್ಯಾ ಮತದಾನ ಮಾಡಲಿದ್ದಾರೆ!

ದೇಶಗಳು ಹೇಗೆ ಮತದಾನ ಮಾಡುತ್ತವೆ ಎಂಬ ಪ್ರಶ್ನೆಗೆ, ಉತ್ತರ ಹೀಗಿದೆ ನೋಡಿ. ಮೇಘಾಲಯದ ಪೂರ್ವ ಖಾಸಿ ಜಿಲ್ಲೆಯ ಶೆಲ್ಲಾ ವಿಧಾನಸಭಾ ಕ್ಷೇತ್ರದ ತ್ಮಾರ್‌ ಎಲಕಾ ಗ್ರಾಮದ ಜನರಿಗೆ ಇಂಗ್ಲಿಷ್‌ ಹೆಸರು ಇಟ್ಟುಕೊಳ್ಳುವ ಹವ್ಯಾಸ ಇದೆ. ಹೀಗಾಗಿ ಇದೆಲ್ಲಾ ಸಾಧ್ಯವಾಗಿದೆ.

ಗ್ರಾಮಸ್ಥರಿಗೆ ಇಂಗ್ಲಿಷ್‌ ಹೆಸರುಗಳ ವ್ಯಾಮೋಹ, ಅದು ಪ್ರಾಸಬದ್ಧವಾಗಿದ್ದರೆ ಸಾಕು, ಅವರಿಗೆ ಅದರ ಅರ್ಥದ ಅರಿವಿರುವುದಿಲ್ಲ. 850 ಪುರುಷ ಮತ್ತು 916 ಮಹಿಳಾ ಮತದಾರರಿರುವ ಈ ಗ್ರಾಮದಲ್ಲಿ ಹೆಚ್ಚಿನ ಮತದಾರರ ಹೆಸರು ಇದೇ ರೀತಿ ವಿಶಿಷ್ಟವಾದುದಾಗಿದೆ. ಗ್ರಾಮದಲ್ಲೇ ಅತ್ಯತ್ತುಮ ಇಂಗ್ಲಿಷ್‌ ಹೆಸರು ‘ಸ್ವೆಟರ್‌’ ಎಂಬ ಮಹಿಳೆಯ ಮಗಳ ಹೆಸರು. ಸ್ವೆಟರ್‌ ತಮ್ಮ ಮಗಳಿಗೆ ‘ಐ ಹ್ಯಾವ್‌ ಬೀನ್‌ ಡೆಲಿವರ್ಡ್‌!’ ಎಂದು ಹೆಸರಿಟ್ಟಿದ್ದಾರೆ.

ಟೇಬಲ್‌, ಗ್ಲೋಬ್‌, ಪೇಪರ್‌, ಅರೇಬಿಯನ್‌ ಸೀ, ಪೆಸಿಫಿಕ್‌, ರಿಕ್ವೆಸ್ಟ್‌, ಲವ್ಲಿನೆಸ್‌, ಹ್ಯಾಪಿನೆಸ್‌, ಗುಡ್‌ನೆಸ್‌, ಯುನಿಟಿ ಹೀಗೆ ವಿಧವಿಧವಾದ ನೂರಾರು ಹೆಸರುಗಳು ಈ ಗ್ರಾಮದಲ್ಲಿವೆ.