ಗೋಮಾಂಸ ಸೇವನೆ ನಮ್ಮ ಆಹಾರ ಸಂಸ್ಕೃತಿಯ ಭಾಗ. ನನ್ನ ಜನರ ಹಿತಾಸಕ್ತಿಯನ್ನು ಕಾಪಾಡುವವುದು ನನ್ನ ಹೊಣೆಗಾರಿಕೆಯಾಗಿದೆ. ನನ್ನ ಜನರ ಭಾವನೆಗಳನ್ನು ನಾನು ಗೌರವಿಸಲೇಬೇಕು. ಬಿಜೆಪಿಯು ಜಾತ್ಯತೀತೇತರ ಸಿದ್ಧಾಂತವನ್ನು ಹೇರಲು ಯತ್ನಿಸುತ್ತಿದ್ದು, ಅದನ್ನು ಬೆಂಬಲಿಸಲಾರೆ.  ಬಿಜೆಪಿ ಕ್ರೈಸ್ತ-ವಿರೋಧಿ ಪಕ್ಷವಾಗಿದೆ ಎಂದು ಗಾರೋ ಬುಡಕಟ್ಟಿಗೆ ಸೇರಿದ ಬಾಚು ಮಾರಕ್ ಹೇಳಿದ್ದಾರೆ.

ನಾರ್ತ್ ಗಾರೋ ಹಿಲ್ಸ್ (ಮೇಘಾಲಯ): ಕೇಂದ್ರ ಸರ್ಕಾರ ಇತ್ತೀಚೆಗೆ ಹೊರಡಿಸಿರುವ ಗೋಹತ್ಯೆ/ಮಾರಾಟಕ್ಕೆ ಸಂಬಂಧಿಸಿ ಸುತ್ತೋಲೆಯನ್ನು ಪ್ರತಿಭಟಿಸಿ ಮೇಘಾಲಯದ ಇನ್ನೋರ್ವಾ ಬಿಜೆಪಿ ನಾಯಕ ಬಾಚು ಮಾರಕ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.

ಗೋಮಾಂಸ ಸೇವನೆ ನಮ್ಮ ಆಹಾರ ಸಂಸ್ಕೃತಿಯ ಭಾಗ. ನನ್ನ ಜನರ ಹಿತಾಸಕ್ತಿಯನ್ನು ಕಾಪಾಡುವವುದು ನನ್ನ ಹೊಣೆಗಾರಿಕೆಯಾಗಿದೆ. ನನ್ನ ಜನರ ಭಾವನೆಗಳನ್ನು ನಾನು ಗೌರವಿಸಲೇಬೇಕು. ಬಿಜೆಪಿಯು ಜಾತ್ಯತೀತೇತರ ಸಿದ್ಧಾಂತವನ್ನು ಹೇರಲು ಯತ್ನಿಸುತ್ತಿದ್ದು, ಅದನ್ನು ಬೆಂಬಲಿಸಲಾರೆ. ಬಿಜೆಪಿ ಕ್ರೈಸ್ತ-ವಿರೋಧಿ ಪಕ್ಷವಾಗಿದೆ ಎಂದು ಗಾರೋ ಬುಡಕಟ್ಟಿಗೆ ಸೇರಿದ ಬಾಚು ಮಾರಕ್ ಹೇಳಿದ್ದಾರೆ.

ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮೂರು ವರ್ಷ ಸಂಭ್ರಮಾಚರಣೆ ಸಂದರ್ಭದಲ್ಲಿ ಬಾಚು ಫೆಸ್’ಬುಕ್’ನಲ್ಲಿ ಮಾರಕ್ ಬೀಫ್ ಪಾರ್ಟಿಯ ಪ್ರಸ್ತಾಪ ಮಾಡಿದ್ದರು. ಅದಕ್ಕೆ ಪಕ್ಷದ ಇತರ ನಾಯಕರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು.

ನಾಲ್ಕು ದಿನಗಳ ಹಿಂದೆ ಇದೇ ಕಾರಣಕ್ಕಾಗಿ ಬರ್ನಾರ್ಡ್ ಮಾರ್ಕ್ ಎಂಬ ಬಿಜೆಪಿ ಮುಖಂಡ ಪಕ್ಷಕ್ಕೆ ರಾಜೀನಾಮೆ ನೀಡಿದ್ದರು.