ನಿನ್ನೆ ರಾತ್ರಿ ಮಾಜಿ ಮುಖ್ಯಮಂತ್ರಿ ಬಿಎಸ್.ಯಡಿಯೂರಪ್ಪ ಅವರ ದೆಹಲಿಯ ನಿವಾಸದಲ್ಲಿ ಬಿಜೆಪಿ ನಾಯಕರ ಸಭೆ ನಡೆಯಿತು.  

ಬೆಂಗಳೂರು(ಜು.17): ನಿನ್ನೆ ರಾತ್ರಿ ಮಾಜಿ ಮುಖ್ಯಮಂತ್ರಿ ಬಿಎಸ್.ಯಡಿಯೂರಪ್ಪ ಅವರ ದೆಹಲಿಯ ನಿವಾಸದಲ್ಲಿ ಬಿಜೆಪಿ ನಾಯಕರ ಸಭೆ ನಡೆಯಿತು.

ಸಭೆ ನಳಿಕ ಮಾತನಾಡಿದ ಸಂಸದ ಅನಂತ್​ ಕುಮಾರ್​ ಹೆಗಡೆ, ಸಭೆಯಲ್ಲಿ ಕೇವಲ ಅಮಿತ್ ಶಾ ಪ್ರವಾಸ ಹಾಗೂ ವಿಧಾನ ಪರಿಷತ್​ ಚುನಾವಣೆ ಬಗ್ಗೆ ಚರ್ಚೆಯಾಗಿದೆ. ಇನ್ನು ಲಿಂಗಾಯತ ಸ್ವತಂತ್ರ ಧರ್ಮದ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ. ಧಾರ್ಮಿಕ ವಿಷಯಕ್ಕೆ ರಾಜಕೀಯ ಮಧ್ಯ ಪ್ರವೇಶ ಮಾಡಲ್ಲ. ಈ ಕುರಿತು ಧಾರ್ಮಿಕ ಮುಖಂಡರು ನಿಲುವು ತೆಗೆದುಕೊಳ್ಳಲಿ ಅಂತ ಹೇಳಿದರು.

ಇನ್ನು ಸಭೆಯಲ್ಲಿ ಸಂಸದ ಪ್ರಹ್ಲಾದ್​ ಜೋಶಿ, ಶೋಭಾ ಕರಂದ್ಲಾಜೆ, ನಳಿನ್​ ಕುಮಾರ್​ ಕಟೀಲ್​ ಸೇರಿ ಹಲವು ಸಂಸದರು ಭಾಗಿಯಾಗಿದ್ರು.