ಬೆಂಗಳೂರು[ನ.02] ಆಕಾಶವಾಣಿಯ ಇಂದಿನ ಕಾರ್ಯಕ್ರಮಗಳ ಪಟ್ಟಿ ಖಂಡಿತ ನಮಗೆ ಯಾರಿಗೂ ನೆನಪಿಲ್ಲ. ಟಿವಿ, ಮೊಬೈಲ್, ಯು ಟ್ಯೂಬ್ ನಲ್ಲಿ ಮುಳುಗಿ ಹೋಗಿದ್ದೇವೆ. ಮುಂಜಾನೆ  6.55ಕ್ಕೆ ಸಂಸ್ಕೃತ ವಾರ್ತೆಯನ್ನು ಒಂದು ತಲೆಮಾರಿನ ಜನ ಮರೆಯಲು ಸಾಧ್ಯವೇ ಇಲ್ಲ.  

ಸಂಸ್ಕೃತ ವಾರ್ತಾ ವಾಚಕ ಬಲದೇವಾನಂದ ಸಾಗರ ಅವರು ಆಕಾಶವಾಣಿಯಲ್ಲಿ ತಮ್ಮನಲವತ್ತು ವರ್ಷಗಳ ಸಾರ್ಥಕ ಸೇವೆ ಮುಗಿಸಿದ್ದಾರೆ. ಅವರನ್ನು ಹತ್ತಿರದಿಂದ ನೋಡುವ ಅವಕಾಶ ನಮಗೆ ಈಗ ಲಭ್ಯವಾಗಿದೆ.

ಸೋಶಿಯಲ್ ಮೀಡಿಯಾದಲ್ಲಿ ಬಲದೇವಾನಂದ ಸಾಗರ ಅವರನ್ನು ಸಂಸ್ಥೆಯೊಂದು ಸಂದರ್ಶನ ಮಾಡುತ್ತಿರುವ ವಿಡಿಯೋ ವೈರಲ್ ಆಗುತ್ತಿದೆ. ಸಾವಿರಾರು ಜನರು ಶೇರ್ ಮಾಡುತ್ತ ತಮ್ಮ ಹಳೆಯ ಅನುಭವ ಹಂಚಿಕೊಳ್ಳುತ್ತಿದ್ದಾರೆ. ಬನ್ನಿ ನೀವು ಇನ್ನೊಮ್ಮೆ ಅವರ ಧ್ವನಿ ಕೇಳಿಕೊಂಡು ಬನ್ನಿ..