ಈ ಸಾಧನೆ ಮಾಡಿರುವುದು ರಾಜ್'ಕುಮಾರ್ ವೈಶ್ಯ ಎಂಬುವವರು. ಇವರು ಜನಿಸಿದ್ದು 1920ರಲ್ಲಿ ಉತ್ತರಪ್ರದೇಶದ ಬರಲೇ ಪಟ್ಟಣದಲ್ಲಿ. ಪದವಿ ಪೂರ್ಣಗೊಳಿಸಿದ್ದು 1938ರಲ್ಲಿ ಖಾಸಗಿ ಕಂಪನಿಯಲ್ಲಿ ಮುಖ್ಯ ವ್ಯವಸ್ಥಾಪರಾಗಿ ಕಾರ್ಯ ನಿರ್ವಹಿಸಿದ ಅವರು 1980ರಲ್ಲಿ ಬಿಹಾರದಲ್ಲಿ ನಿವೃತ್ತರಾದರು.
ಪಾಟ್ನಾ(ಡಿ.26): ವಿದ್ಯೆ ಕಲಿಯಲು ವಯಸ್ಸಿನ ಮಿತಿಯಿಲ್ಲ ಎಂಬುದನ್ನು 98ರ ವೃದ್ಧರೊಬ್ಬರು ನಿರೂಪಿಸಿದ್ದಾರೆ. 50, 60, 70ರ ವಯಸ್ಸಿನಲ್ಲಿ ಪದವಿ, ಸ್ನಾತಕೋತ್ತರ ಪದವಿ ಪಡೆದಿರುವುದನ್ನು ನಾವು ಕೇಳಿದ್ದೇವೆ. ಆದರೆ ನಡೆದಾಡಲು ಆಗದ 98ರ ವಯಸ್ಸಿನಲ್ಲಿ ಪಾಟ್ನಾದ ನಳಂದ ವಿವಿಯ ಮುಕ್ತ ವಿಶ್ವವಿದ್ಯಾಲಯದಲ್ಲಿ ಎಂ.ಎ (ಅರ್ಥಶಾಸ್ತ್ರ) ವೃದ್ಧರೊಬ್ಬರು ಪದವಿಯನ್ನು ಪಡೆದುಕೊಂಡಿದ್ದಾರೆ. ಲಿಮ್ಕಾ ಬುಕ್ ದಾಖಲೆಯಲ್ಲಿ ಈ ವೃದ್ಧನ ಸಾಧನೆಯನ್ನು ಗುರುತಿಸಲಾಗಿದೆ. ಭಾರತೀಯ ವಯೋಮಿತಿಯ ಸರಾಸರಿಯನ್ನು ಗಮನಿಸಿದರೆ ಇಷ್ಟು ಹೊತ್ತಿಗಾಗಲೇ ಮೃತರಾಗುವುದು ಸಹಜ.
ಈ ಸಾಧನೆ ಮಾಡಿರುವುದು ರಾಜ್'ಕುಮಾರ್ ವೈಶ್ಯ ಎಂಬುವವರು. ಇವರು ಜನಿಸಿದ್ದು 1920ರಲ್ಲಿ ಉತ್ತರಪ್ರದೇಶದ ಬರಲೇ ಪಟ್ಟಣದಲ್ಲಿ. ಪದವಿ ಪೂರ್ಣಗೊಳಿಸಿದ್ದು 1938ರಲ್ಲಿ ಖಾಸಗಿ ಕಂಪನಿಯಲ್ಲಿ ಮುಖ್ಯ ವ್ಯವಸ್ಥಾಪರಾಗಿ ಕಾರ್ಯ ನಿರ್ವಹಿಸಿದ ಅವರು 1980ರಲ್ಲಿ ಬಿಹಾರದಲ್ಲಿ ನಿವೃತ್ತರಾದರು.
ಸೀಕ್ರೇಟ್ ಬಿಚ್ಚಿಟ್ಟ ವೃದ್ಧ
2016ದಲ್ಲಿ ಮೊದಲ ವರ್ಷದ ಪರೀಕ್ಷೆ ಬರೆದ ಅವರು 2017ರಲ್ಲಿ ಅಂತಿಮ ವರ್ಷದ ಪದವಿ ಪೂರೈಸಿದರು. ರಾಜ್'ಕುಮಾರ್ ಅವರು ಈ ವಯಸ್ಸಿನಲ್ಲಿಯೂ ಸ್ನಾತಕೋತ್ತರ ಪದವಿ ಪಡೆಯಲು 2 ಬಹುಮುಖ್ಯ ಕಾರಣಗಳಿವೆ.'ಕೊನೆಗೂ ನನ್ನ ಕನಸು ನನಸಾಗಿದೆ ಎನ್ನುವ ಅವರು 2 ವರ್ಷದ ಹಿಂದೆ ಸ್ನಾತಕೋತ್ತರ ಪದವಿ ಪಡೆಯಲು ಪೂರ್ಣ ತಯಾರಿ ನಡೆಸಿದ್ದೆ. ನನ್ನ ಕನಸು ಕೊನೆಗೂ ಈಡೇರಿದೆ. ನಾನು ಈ ಅರ್ಥಶಾಸ್ತ್ರ ಸ್ನಾತಕೋತ್ತರ ಪದವಿ ಪಡೆಯಲು 2 ಪ್ರಮುಖ ಕಾರಣಗಳಿವೆ.
ಮೊದಲನೆಯದು' ಇದು ನನ್ನ ಬಹುದಿನದ ಕನಸಾಗಿತ್ತು, ಎರಡನೆಯದು ಬಡತನದಂತಹ ಸಮಸ್ಯೆಗಳನ್ನು ಪರಿಹರಿಸಲು ಭಾರತ ಏಕೆ ವಿಫಲವಾಗುತ್ತಿದೆ ಎಂಬುದನ್ನು ತಿಳಿದುಕೊಳ್ಳಲು' ಎನ್ನುತ್ತಾರೆ' ರಾಜ್'ಕುಮಾರ್.