Asianet Suvarna News Asianet Suvarna News

ಮತ್ತೊಮ್ಮೆ ಕನ್ನಡಿಗರ ಭಾವನೆ ಕೆರಳಿಸಿದ ಕಿರಣ್ ಮಜುಂದಾರ್ ಶಾ

ಕನ್ನಡ ಸಂಘಟನೆಗಳ ಬಗ್ಗೆ ಮಾತನಾಡುತ್ತ ಮಾಧ್ಯಮಗಳ ಮೇಲೂ ಗೂಬೆ ಕೂರಿಸಿದ್ದ ಕಿರಣ್ ಮಜುಂದಾರ್ ಶಾ ಟ್ವೀಟ್ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಬಿಸಿ ಬಿಸಿ ಚರ್ಚೆ ಹುಟ್ಟುಹಾಕಿದೆ. ಕನ್ನಡಗಿರ ಭಾವನೆ ಕೆರಳಿವುವಂತೆ ನಡೆದುಕೊಂಡಿದ್ದ ಷಾ ಕ್ಷಮೆ ಕೇಳಬೇಕು ಎಂಬ ಆಗ್ರಹ ವ್ಯಕ್ತವಾಗಿದೆ.

MD of Biocon Limited Kiran Mazumdar-Shaw irks Kannada sentiments

ಬೆಂಗಳೂರು[ಜು.9] ಕನ್ನಡ ಸಂಘಟನೆಗಳನ್ನುಅತ್ಯಲ್ಪ ಎಂದು ಕರೆದು ಮಾಧ್ಯಮಗಳು ಅವಕ್ಕೆ ಪುಕ್ಕಟೆ ಪ್ರಚಾರ ನೀಡುತ್ತಿವೆ ಎಂದು ಟ್ವೀಟ್ ಮಾಡಿದ್ದ ಉದ್ಯಮಿ ಕಿರಣ್ ಮಜೂಂದಾರ್ ಶಾ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಕನ್ನಡಿಗರ ಭಾವನೆ ಕೆರಳಿಸಿದ ಬಯೋಕಾನ್ ಸಂಸ್ಥೆಯ ಮುಖ್ಯಸ್ಥೆ ವಿರುದ್ಧ ಸಾಮಾಜಿಕ ತಾಣದಲ್ಲಿ ಕನ್ನಡಿಗರು ಚಾಟಿ ಬೀಸಿದ್ದಾರೆ.

ಬೇಜವಾಬ್ದಾರಿತನದ ಟ್ವೀಟ್ ಮಾಡಿದ ಕಿರಣ್ ಮಜುಂದಾರ್ ಶಾಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಪತ್ರವೊಂದನ್ನು ಬರೆದಿದೆ. ಎರಡು ಪುಟದ ಪತ್ರದಲ್ಲಿ ಸರ್ಕಾರಿ ಶಾಲೆಗಳಿಗೆ ಹಣಕೊಟ್ಟು ತೆರಿಗೆ ವಿನಾಯ್ತಿ ಪಡೆಯುವವರು ನೀವು,  ಸರ್ಕಾರಿ ಶಾಲೆಗಳ ಉದ್ಧಾರಕ್ಕೆ ಆಂಗ್ಲ ಮಾಧ್ಯಮವೊಂದೆ ಮಾನದಂಡ ಅಲ್ಲ ಎಂದು ಜಾಡಿಸಿದೆ.

ಮಾತೃಭಾಷೆ ಶಿಕ್ಷಣಕ್ಕೆ ಆದ್ಯತೆ ಸಂಸ್ಕೃತಿ ಅಳಿವು ಉಳಿವಿಗಿಂತ ಮಿಗಿಲಿದೆ. ವಿದ್ಯಾರ್ಥಿಯ ಸಮಗ್ರ ಬೆಳವಣಿಗೆಯಿಂದಲೂ ಮಾತೃಭಾಷೆ ಅತ್ಯವಶ್ಯಕ ಎಂದು ಶಾಗೆ ತಿಳಿಹೇಳಿರುವ ಪ್ರಾಧಿಕಾರ "ಈ ಪತ್ರದಿಂದಾದ್ರೂ ನಿಮ್ಮ ಬೇಜವಾಬ್ದಾರಿ ಹೇಳಿಕೆಗೆ ಬ್ರೇಕ್ ಬೀಳಲಿ" ಎಂದು ಹೇಳಿದೆ.

"

ಕ್ಷಮೆ ಕೇಳಿ ಕಿರಣ್ ಮಜುಮ್ದಾರ್ ಶಾ: ಕನ್ನಡ ಹೋರಾಟಗಾರರಿಗೆ ಅವಮಾನವಾಗುವ ರೀತಿ ಬರೆದ ಶಾ ಕ್ಷಮೆ ಕೇಳಬೇಕು. ಇದಕ್ಕೂ ಮೊದಲು ಬೆಂಗಳೂರಿನಿಂದ, ಕರ್ನಾಟಕದಿಂದ ಸಾಕಷ್ಟು ಲಾಭ ಪಡೆದುಕೊಂಡ ಕಿರಣ್ ಹೋರಾಟಗಾರರ ಬಗ್ಗೆ ಮಾತನಾಡಿರುವುದಕ್ಕೆ ಸಾಮಾಜಿಕ ತಾಣದಲ್ಲಿ ಪ್ರತಿ ಕ್ಷಣ ವಿರೋಧ ವ್ಯಕ್ತವಾಗುತ್ತಿದೆ.

ಈಗ ಮಾಧ್ಯಮಗಳು ಬೇಡವಾಯಿತೆ?:  ಇದೇ ಕಿರಣ್ ಮಜುಂದಾರ್ ಷಾಗೆ ಎಂಐಟಿ ಸದಸ್ಯರಾಗಿ ನೇಮಕರಾದಾಗ ಕರ್ನಾಟಕದ ಮಾಧ್ಯಮಗಳೆ ಕಿರಣ್ ಅವರನ್ನು ಕರ್ನಾಟಕದ ಹೆಮ್ಮೆ ಎಂದು ಕೊಂಡಾಡಿದ್ದವು. ಆದ ಮಾಧ್ಯಮಗಳಿಗೆ ಅಭಿನಂದನೆ ಸಲ್ಲಿಸಿದ್ದ ಕಿರಣ್ ಗೆ ಈಗ ಅದೇ ಮಾಧ್ಯಮಗಳು ಪುಕ್ಕಟೆ ಪ್ರಚಾರ ನೀಡುವ ತಾಣವಾಗಿ ಕಂಡಿರುವುದು ಆಶ್ಚರ್ಯ.

ಕಿರಣ್ ಬಾಯಲ್ಲಿ ಬಂದಳೂರು: ಕಾವೇರಿ ನೀರಿಗಾಗಿ ಕನ್ನಡಿಗರು ಬಂದ್ ಗೆ ಕರೆಕೊಟ್ಟ  ವೇಳೆ ಇದೇ ಕಿರಣ್  ‘ಮತ್ತೊಂದು ಬಂದ್, ಇದೀಗ 'ಬಂದಳೂರು', ಬಂದ್‌ಗಳಿಂದ ಉತ್ಪಾದಕತೆ ಕುಂಠಿತವಾಗುತ್ತದೆ. ಎರಡೂ ರಾಜ್ಯಗಳ ರೈತರು ಪರಸ್ಪರ ಹಂಚಿಕೊಳ್ಳದಿರುವಂಥಾ ಪರಿಸ್ಥಿತಿ ತೀರಾ ವಿಷಾದನೀಯ  ಎಂದು ಹೇಳಿದ್ದು ಕನ್ನಡಿಗರನ್ನು ಕೆರಳಿಸಿತ್ತು.

Follow Us:
Download App:
  • android
  • ios