ಲಿಂಗಾಯಿತ ಧರ್ಮದ ಬಗ್ಗೆ, ಶ್ರೀಗಳ ಹೇಳಿಕೆಯನ್ನು ನಾನು ತಿರುಚಿಲ್ಲ. ನಾನು ತಪ್ಪು ಮಾಡಿದ್ರೆ ಶ್ರೀಗಳ ಕ್ಷೇತ್ರದಲ್ಲೇ ತಲೆ ಬೋಳಿಸಿಕೊಂಡು ಕ್ಷಮಾಪಣೆ ಕೇಳುತ್ತೇನೆ ಎಂದು ಪಾಟೀಲ್ ಸವಾಲು ಹಾಕಿದ್ದಾರೆ.
ಬೆಂಗಳೂರು(ಸೆ.12): ಲಿಂಗಾಯಿತ ಹಾಗೂ ವೀರಶೈವ ಧರ್ಮಯುದ್ಧ ತಾರಕಕ್ಕೇರಿದ್ದು, ಇದೀಗ ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್ ಹೊಸ ಸವಾಲು ಹಾಕಿದ್ದಾರೆ.
ಒಂದು ವೇಳೆ ಶ್ರೀಗಳು ಲಿಂಗಾಯಿತ ಧರ್ಮದ ಪ್ರತ್ಯೇಕತೆಯ ಬಗ್ಗೆ ಮಾತನಾಡಿಲ್ಲ ಎಂದಾದರೆ ನಾನು ತುಮಕೂರಿಗೆ ಕುಟುಂಬ ಸಮೇತವಾಗಿ ಹೋಗಿ ಅಲ್ಲೇ ತಲೆ ಬೋಳಿಸಿಕೊಳ್ಳುತ್ತೇನೆ ಎಂದು ಎಂ.ಬಿ. ಪಾಟೀಲ್ ಹೇಳಿದ್ದಾರೆ.
ಲಿಂಗಾಯಿತ ಧರ್ಮದ ಬಗ್ಗೆ, ಶ್ರೀಗಳ ಹೇಳಿಕೆಯನ್ನು ನಾನು ತಿರುಚಿಲ್ಲ. ನಾನು ತಪ್ಪು ಮಾಡಿದ್ರೆ ಶ್ರೀಗಳ ಕ್ಷೇತ್ರದಲ್ಲೇ ತಲೆ ಬೋಳಿಸಿಕೊಂಡು ಕ್ಷಮಾಪಣೆ ಕೇಳುತ್ತೇನೆ ಎಂದು ಪಾಟೀಲ್ ಸವಾಲು ಹಾಕಿದ್ದಾರೆ.