Asianet Suvarna News Asianet Suvarna News

ಶಾಮನೂರಿಗೆ ಅರಳು ಮರಳು : ಎಂ.ಬಿ.ಪಾಟೀಲ್

ಕಾಂಗ್ರೆಸ್ ಪಕ್ಷದಲ್ಲಿ ಎದ್ದಿರುವ ಅಸಮಾಧಾನದ ಅಲೆ ಮುಂದುವರಿದ್ದು, ಹಿರಿಯ ಮುಖಂಡ ಶಾಮನೂರು ಶಿವಶಂಕರಪ್ಪ ಅವರ ವಿರುದ್ಧ ಮಾಜಿ ಸಚಿವ ಎಂ.ಬಿ.ಪಾಟೀಲ್ ಅಸಮಾಧಾನ ಹೊರಹಾಕಿದ್ದು, ಅವರಿಗೆ ಅರಳು - ಮರಳು ಎಂದು ಹೇಳಿದ್ದಾರೆ.
 

MB Patil Slams Congress Leader Shamanur Shivashankarappa
Author
Bengaluru, First Published Oct 21, 2018, 9:31 AM IST

ಬೆಂಗಳೂರು : ಲಿಂಗಾಯತ ಧರ್ಮ ವಿಭಜನೆ ಕುರಿತು ಸಚಿವ ಡಿ.ಕೆ.ಶಿವಕುಮಾರ್ ನೀಡಿದ ಹೇಳಿಕೆಯಿಂದ ಕಾಂಗ್ರೆಸ್ ಪಕ್ಷದಲ್ಲಿ ಎದ್ದಿರುವ ಅಸಮಾಧಾನದ ಅಲೆ ಮುಂದುವರಿದ್ದು, ಹಿರಿಯ ಮುಖಂಡ ಶಾಮನೂರು ಶಿವಶಂಕರಪ್ಪ ಅವರ ವಿರುದ್ಧ ಮಾಜಿ ಸಚಿವ ಎಂ.ಬಿ.ಪಾಟೀಲ್ ವಾಗ್ದಾಳಿ ನಡೆಸಿದ್ದಾರೆ. 

ಶಾಮನೂರ ಶಿವಶಂಕರಪ್ಪ ಅವರಿಗೆ ಅರಳು- ಮರಳು  ಎಂಬಂತಾಗಿದೆ. ಅವರು ಮಾಜಿ ಸಚಿವ ವಿನಯ ಕುಲಕರ್ಣಿ ಬಗ್ಗೆ ಹಿಯ್ಯಾಳಿಸಿ ಮಾತನಾಡುವುದು ಸರಿಯಲ್ಲ . ಶಾಮನೂರ ಶಿವಶಂಕರಪ್ಪ ಅವರು ಹಿರಿಯರು. ವಿನಯ ಕುಲಕರ್ಣಿ  ಚುನಾವಣೆಯಲ್ಲಿ ಸೋತು ಸುಣ್ಣವಾಗಿ ಮನೆಯಲ್ಲಿ ಕೂತಿದ್ದಾರೆ ಎಂದು ಹೇಳಿದ್ದು ಸರಿಯಲ್ಲ. 

ಶಾಮನೂರು ಪುತ್ರ ಮಲ್ಲಿಕಾರ್ಜುನ ಸಹ ಸೋತು ಸುಣ್ಣವಾಗಿದ್ದಾರೆ.  ಇದನ್ನು ಶಾಮನೂರು ಅವರು ಮರೆತ್ತಿದ್ದಾರೆ ಎಂದು ಎಂ.ಬಿ.ಪಾಟೀಲ್ ವಾಗ್ದಾಳಿ ನಡೆಸಿದರು. ಶಾಮನೂರ ಶಿವಶಂಕರಪ್ಪನವರು ನನ್ನ ಮೇಲೆ ಹೈಕಮಾಂಡ್‌ಗೆ ಕಂಪ್ಲೆಂಟ್ ಕೊಡ್ತೀನಿ ಅಂತ ಹೇಳುತ್ತಿದ್ದಾರೆ. ಇದಕ್ಕೆ ನಾನೇನು ಬಗ್ಗುವನಲ್ಲ. ನಿಮ್ಮ ವಯಸ್ಸಿಗೆ ನಾನು ಮರ್ಯಾದೆ ಕೊಡುತ್ತೇನೆ. ಶಾಮನೂರ ಯಾರ ಜೊತೆ ಕೂಡಿದ್ದಾರೋ (ಪಂಚ ಪೀಠಾಧಿಪತಿ) ಅವರು ನಮ್ಮ ಪಕ್ಷದ ಸೋಲಿಗೆ ಕಾರಣರಾಗಿದ್ದಾರೆ ಎಂದು ದೂರಿದರು. 

ನನ್ನ ಬಳಿ ಜಾಸ್ತಿ ದುಡ್ಡು ಇದೆ ಎಂದು ಶಾಮನೂರ ಹೇಳುತ್ತಾರೆ. ನನ್ನಲ್ಲಿ ಒಂದು ರುಪಾಯಿ ಇದ್ದರೆ, ಅವರಲ್ಲಿ ನೂರು ರುಪಾಯಿ ಇದೆ. ಹಾಗಾಗಿನಾವು ಧರ್ಮ ಒಡೆದವರು ಸೋತಿದ್ದೇವೆ. ಆದರೆ ನಿಮ್ಮ  ಮಗ ಒಂದು ಮಾಡಲು ಹೊರಟಿರುವವರು ಸೋತಿದ್ದಾರೆ ಏಕೆ? ಎಂದು ಪ್ರಶ್ನಿಸಿದರು. ನನ್ನ ಕ್ಷೇತ್ರಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರೇ ಬಂದರೂ ನಾನು ಗೆದ್ದಿದ್ದೇನೆ. 

ಶರಣ ಪ್ರಕಾಶ ಪಾಟೀಲ, ವಿನಯ ಕುಲಕರ್ಣಿ ಬೇರೆ ಬೇರೆ ಕಾರಣಗಳಿಂದ ಸೋತಿದ್ದಾರೆ. ಉಮೇಶ ಕತ್ತಿ ಸೇರಿದಂತೆ ಅನೇಕ ನಾಯಕರ ಕಾಸ್ಟ್ ಸರ್ಟಿಫಿಕೇಟ್‌ನಲ್ಲಿ ಲಿಂಗಾಯತ ಅಂತಾ ಇದೆ. ಆದರೆ ಸುಖಾಸುಮ್ಮನೆ ಅವರು ನಾವು ವೀರಶೈವರು ಅಂತಾ ಹೇಳಿಕೊಳ್ಳುತ್ತಿದ್ದಾರೆ ಎಂದರು.ಡಿಕೆಶಿ ವೈಯಕ್ತಿಕ ಹೇಳಿಕೆ ನೀಡಿದ್ದಾರೆ ಎಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಅವರು ರಂಭಾಪುರಿ ಶ್ರೀಗಳನ್ನು ಇಂಪ್ರೆಸ್ ಮಾಡಲು ಹೇಳಿಕೆ ನೀಡಿದ್ದಾರೆ ಎಂದು ಎಂ.ಬಿ.ಪಾಟೀಲ್ ಗುಡುಗಿದರು. 

Follow Us:
Download App:
  • android
  • ios