ಪರ್ರಿಕರ್ ಕ್ಷಮೆಗೆ ಸಚಿವ ಎಂ.ಬಿ. ಪಾಟೀಲ್ ಆಗ್ರಹ

news | Monday, January 15th, 2018
Suvarna Web Desk
Highlights

ಕನ್ನಡಿಗರು ಹರಾಮಿಗಳು ಎಂಬ ಹೇಳಿಕೆ ಗೋವಾ ಸಿಎಂ ಮನೋಹರ್ ಪರಿಕರ್ ಕ್ಷಮೆ ಕೇಳಬೇಕು. ಇಲ್ಲವಾದಲ್ಲಿ ಗೋವಾ ಸರ್ಕಾರಕ್ಕೆ. ಕರ್ನಾಟಕ ಕಠಿಣ ನಿರ್ಧಾರಗಳ ಮೂಲಕ ಉತ್ತರಿಸಲಿದೆ ಎಂದು ಸಚಿವ ಎಂ.ಬಿ. ಪಾಟೀಲ್ ಎಚ್ಚರಿಕೆ ನೀಡಿದ್ದಾರೆ.

ಬೆಳಗಾವಿ: ಕನ್ನಡಿಗರು ಹರಾಮಿಗಳು ಎಂಬ ಹೇಳಿಕೆ ಗೋವಾ ಸಿಎಂ ಮನೋಹರ್ ಪರಿಕರ್ ಕ್ಷಮೆ ಕೇಳಬೇಕು. ಇಲ್ಲವಾದಲ್ಲಿ ಗೋವಾ ಸರ್ಕಾರಕ್ಕೆ. ಕರ್ನಾಟಕ ಕಠಿಣ ನಿರ್ಧಾರಗಳ ಮೂಲಕ ಉತ್ತರಿಸಲಿದೆ ಎಂದು ಸಚಿವ ಎಂ.ಬಿ. ಪಾಟೀಲ್ ಎಚ್ಚರಿಕೆ ನೀಡಿದ್ದಾರೆ.

ಗೋವಾ-ಕರ್ನಾಟಕ ರಾಜ್ಯಗಳ ಮಧ್ಯೆ ನೀರಿನ ಮಹದಾಯಿ ಯುದ್ಧ ಆರಂಭವಾಗಿದೆ. ಮೊನ್ನೆ ಬೆಳಗಾವಿ ಜಿಲ್ಲೆ ಕಣಕುಂಬಿಗೆ ಗೋವಾ ಸಚಿವ ವಿನೋದ್ ಪಾಳೇಕರ್ ಶಿಷ್ಟಾಚಾರ್ ಉಲ್ಲಂಘಿಸಿ ಭೇಟಿ ನೀಡಿದ್ದು, ಕನ್ನಡಿಗರನ್ನ ಹರಾಮಿಗಳು ಎಂದು ನಿಂದಿಸಿದ್ದರು. ಅಲ್ಲದೇ, ಸುಪ್ರೀಂ ಕೋರ್ಟ್ ಆದೇಶ ಉಲ್ಲಂಘಿಸಿ ಕಾಮಗಾರಿ ನಡೆಯುತ್ತಿದೆ ಎಂದು ಗೋವಾ ಗಂಭೀರ ಆರೋಪ ಮಾಡಿತ್ತು.

ಈ ಹಿನ್ನೆಲೆಯಲ್ಲಿ ಇವತ್ತು ನೀರಾವರಿ ಸಚಿವ ಎಂ.ಬಿ. ಪಾಟೀಲ್, ಸಚಿವ ರಮೇಶ ಜಾರಕಿಹೊಳಿ ನೇತೃತ್ವದಲ್ಲಿ ಶಾಸಕರು, ಅಧಿಕಾರಿಗಳ ತಂಡ ಕಣಕುಂಬಿಗೆ ಭೇಟಿ ನೀಡಿ, ಪರೀಶಲನೆ ನಡೆಸಿದ್ದಾರೆ.

ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಎಂ.ಬಿ.ಪಾಟೀಲ್, ಗೋವಾ ಸರ್ಕಾರ ಕರ್ನಾಟಕ ವಿರುದ್ಧ ಹಸಿ ಹಸಿ ಸುಳ್ಳು ಆರೋಪ ಮಾಡಿದೆ. ನಾವು ಡ್ಯಾಂ ನಿರ್ಮಿಸಿಲ್ಲ,  ಎರಡು ತಡೆಗೋಡೆ ನಿರ್ಮಿಸಿದ್ದೇವೆ. ಗೋವಾ ಆರೋಪಕ್ಕೆ ಕರ್ನಾಟಕ ಮಹದಾಯಿ ನ್ಯಾಯಾಧೀಕರದಲ್ಲಿ ತಕ್ಕ ಉತ್ತರ ನೀಡಲಿದೆ ಎಂದು ಸಚಿವ ಎಂ.ಬಿ. ಪಾಟೀಲ್ ಹೇಳಿದ್ದಾರೆ.

ಮಹದಾಯಿ ವಿಚಾರದಲ್ಲಿ ಬಿಜೆಪಿ ನಾಯಕರ ಮಹಾನಾಟಕವನ್ನು ನ್ಯಾಯಾಧೀಕರಣ ಹಾಗೂ ಜನರ ಮುಂದೆ ಕಾಂಗ್ರೆಸ್ ಸರ್ಕಾರ ಬಿಚ್ಚಿಡುವುದು; ಕರ್ನಾಟಕದ ವಿರುದ್ಧ ಗೋವಾ ಮಾಡಿದ ಆರೋಪ ಶುದ್ಧ ಹಸಿ ಹಸಿ ಸುಳ್ಳು ಎಂದು ಸಚಿವ ಪಾಟೀಲ್ ತೀರುಗೇಟು ನೀಡಿದ್ದಾರೆ.

Comments 0
Add Comment

    ಮೈತ್ರಿ ಸರ್ಕಾರ ಹೆಚ್ಚು ದಿನ ಉಳಿಯೋದಿಲ್ಲ: ಜಗ್ಗೇಶ್ ಭವಿಷ್ಯ

    news | Tuesday, May 22nd, 2018