ಗೋವಾ ಸಚಿವ ವಿನೋದ್ ಪಾಳೇಕರ್ ಮಹದಾಯಿ ವಿಚಾರವಾಗಿ ಮತ್ತೆ ಉದ್ಧಟತನ ಮೆರೆದಿದ್ದಾರೆ. ಕನ್ನಡಿಗರಿಗೆ ಮಹದಾಯಿ ನೀರು ಕೊಡುವ ಪ್ರಶ್ನೆಯೇ ಇಲ್ಲ  ಎಂದಿದ್ದಾರೆ.  ಇದೀಗ ವಿನೋದ್ ಪಾಳೇಕರ್ ಅವರ ಉದ್ಧಟತನದ ಹೇಳಿಕೆಗೆ ಎಂ.ಬಿ ಪಾಟೀಲ್ ತಿರುಗೇಟು ನೀಡಿದ್ದಾರೆ.

ಬೆಂಗಳೂರು (ಜ.16): ಗೋವಾ ಸಚಿವ ವಿನೋದ್ ಪಾಳೇಕರ್ ಮಹದಾಯಿ ವಿಚಾರವಾಗಿ ಮತ್ತೆ ಉದ್ಧಟತನ ಮೆರೆದಿದ್ದಾರೆ. ಕನ್ನಡಿಗರಿಗೆ ಮಹದಾಯಿ ನೀರು ಕೊಡುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ. ಅಲ್ಲದೇ ಮಹದಾಯಿ ನೀರಿನ ಉಳಿವಿಗಾಗಿ ನಾವು ಯಾವುದೇ ಹಂತಕ್ಕೂ ಹೋಗಲು ಸಿದ್ಧವಿದ್ದೇವೆ ಎಂದು ಹೇಳಿದ್ದಾರೆ. ಕರ್ನಾಟಕ ನ್ಯಾಯಾಂಗ ನಿಂದನೆ ಮಾಡಿದೆ. ಆದ್ದರಿಂದ ಕರ್ನಾಟಕದ ವಿರುದ್ಧ ಕೇಸ್ ದಾಖಲಿಸಲಾಗುವುದು ಎಂದು ಹೇಳಿದ್ದಾರೆ.

ಇದೀಗ ವಿನೋದ್ ಪಾಳೇಕರ್ ಅವರ ಉದ್ಧಟತನದ ಹೇಳಿಕೆಗೆ ಎಂ.ಬಿ ಪಾಟೀಲ್ ತಿರುಗೇಟು ನೀಡಿದ್ದಾರೆ. ನಮ್ಮ ನಾಡ ರಕ್ಷಣೆ ಪಾಠವನ್ನು ನಿಮ್ಮಿಂದ ಕಲಿಯಬೇಕಾಗಿಲ್ಲ. ನಿಮ್ಮಂತ ಸಾವಿರ ಜನ ಬಂದರೂ ಕೂಡ ನಮ್ಮನ್ನು ಬಗ್ಗಿಸಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ. ಟ್ವಿಟರ್’ನಲ್ಲಿ ಪಾಳೇಕರ್ ವಿರುದ್ಧ ಪಾಟೀಲ್ ಈ ಹೇಳಿಕೆ ನೀಡಿದ್ದಾರೆ. ಅಲ್ಲದೇ ಮಹದಾಯಿ ನಮ್ಮ ಹಕ್ಕಾಗಿದೆ. ಇದು ನಿಮ್ಮ ಭಿಕ್ಷೆ ಅಲ್ಲ ಎಂದು ಅವರು ಹೇಳಿಕೆ ನೀಡಿದ್ದಾರೆ.

Scroll to load tweet…