* ಬೆಂಗಳೂರಿನ ಎಂವಿಜೆ ಲೇಔಟ್ ಪಾರ್ಕ್'ನಲ್ಲಿ ರಾಡ್ ಬಿದ್ದು ಬಾಲಕಿ ಸಾವು ಪ್ರಕರಣ* ಪ್ರಿಯಾ(10) ವರ್ಷದ ಬಾಲಕಿ ಸಾವು; ಕುಟುಂಬಕ್ಕೆ 5 ಲಕ್ಷ ಪರಿಹಾರ ಘೋಷಣೆ* ಗುತ್ತಿಗೆದಾರರ ವಿರುದ್ಧ ಕ್ರಮಕ್ಕೆ ಮೇಯರ್ ಜಿ. ಪದ್ಮಾವತಿ ಸೂಚನೆ* ಪ್ರಿಯಾ ಪೋಷಕರಿಂದ ಮೇಯರ್'ಗೆ ತೀವ್ರ ತರಾಟೆ.* ನನ್ನ ಮಗಳ ಪ್ರಾಣಕ್ಕೆ ಬೆಲೆ ಕಟ್ಟಿದರೆ ಕ್ಷಮಿಸಲಾರೆ; ನನಗಾದ ಅನ್ಯಾಯ ಮತ್ಯಾರಿಗೂ ಆಗದಂತೆ ಎಚ್ಚರ ವಹಿಸಬೇಕು: ಪ್ರಿಯಾ ತಂದೆ ಸುಬ್ರಮಣಿ ಆಗ್ರಹ
ಬೆಂಗಳೂರು(ಆ. 14): ಎಂವಿಜೆ ಲೇಔಟ್ ಪಾರ್ಕ್'ನಲ್ಲಿ ರಾಡ್ ಬಿದ್ದು ಮೃತಪಟ್ಟಿದ್ದ ಬಾಲಕಿ ಪ್ರಿಯಾ ಮನೆಗೆ ಅಧಿಕಾರಿಗಳೊಂದಿಗೆ ಮೇಯರ್ ಪದ್ಮಾವತಿ ಭೇಟಿ ನೀಡಿ ಪೋಷಕರಿಗೆ ಸಾಂತ್ವನ ಹೇಳಿದರು. ಜತೆಗೆ 5 ಲಕ್ಷ ಪರಿಹಾರ ಘೋಷಣೆ ಮಾಡಿದರು. ಇದೇ ವೇಳೆ, ಪ್ರಿಯಾ ಪೋಷಕರು ಮೇಯರ್ ಅವರನ್ನು ತರಾಟೆ ತೆಗೆದುಕೊಂಡರು. ನನ್ನ ಮಗಳ ಪ್ರಾಣಕ್ಕೆ ಬೆಲೆ ಕಟ್ಟಿದರೆ ಕ್ಷಮಿಸಲಾರೆ. ಮೂರು ದಿನಗಳಾದರೂ ನೀವು ಯಾವುದೇ ಕ್ರಮ ಜರುಗಿಸಿಲ್ಲ. ನನಗಾದ ಅನ್ಯಾಯ ಮತ್ಯಾರಿಗೂ ಆಗದಂತೆ ಬಿಬಿಎಂಪಿ ಅಧಿಕಾರಿಗಳು ಎಚ್ಚರ ವಹಿಸಬೇಕು ಎಂದು ಪ್ರಿಯಾ ತಂದೆ ಸುಬ್ರಮಣಿ ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ, ಪಾರ್ಕ್'ನ ನಿರ್ವಹಣೆ ಹೊಂದಿರುವ ಗುತ್ತಿಗೆದಾರರ ವಿರುದ್ಧ ಕ್ರಮ ಜರುಗಿಸಬೇಕೆಂದು ಮೇಯರ್ ಪದ್ಮಾವತಿ ಸೂಚನೆ ನೀಡಿದರು.
