Asianet Suvarna News Asianet Suvarna News

ಕಾಂಗ್ರೆಸ್ ಕೈ ಬಿಟ್ಟ ಮಾಯಾವತಿ : ಮಮತಾ ಮುಂದಿನ ನಡೆ ಏನು..?

ಕಾಂಗ್ರೆಸ್ ಗೆ ಕೈ ಕೊಟ್ಟು ಮಾಯಾವತಿ ಮಹಾಘಟಬಂಧನ್ ದಿಂದ ದೂರ ಉಳಿಯುವ ನಿರ್ಧಾರ ಮಾಡಿದ ಬೆನ್ನಲ್ಲೇ ಇದೀಗ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಾಯಾವತಿ ಸಮಸ್ಯೆ ನಿವಾರಿಸುವತ್ತ ಹೆಜ್ಜೆ ಇಟ್ಟಿದ್ದಾರೆ ಎನ್ನಲಾಗಿದೆ.

Mayawati Outburst Will Mamata Salvage Mahagathbandhan Dream
Author
Bengaluru, First Published Oct 6, 2018, 1:59 PM IST
  • Facebook
  • Twitter
  • Whatsapp

ಕೋಲ್ಕತಾ :  ಇನ್ನೇನು ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದು ಇದೇ ವೇಳೆ ಬಿಜೆಪಿಯನ್ನು ಸೋಲಿಸಲು ವಿಪಕ್ಷಗಳ ಒಕ್ಕೂಟ ಸಾಕಷ್ಟು ಸಿದ್ಧತೆಯಲ್ಲಿ ತೊಡಗಿವೆ. ಆದರೆ ಕಳೆದ ವಾರವಷ್ಟೇ ಮಾಯಾವತಿ ತಮ್ಮ ಬೆಂಬಲವನ್ನು ಕೆಲ ರಾಜ್ಯಗಳಲ್ಲಿ ಹಿಂಪಡೆದುಕೊಂಡಿದ್ದು ದೊಡ್ಡ ಹಿನ್ನಡೆಯಾದಂತಾಗಿದೆ. 

ಆದರೆ ಇದೀಗ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಹಾಘಟಬಂಧನ್ ನಂಟಲ್ಲಿ ಎದುರಾದ  ಸಮಸ್ಯೆಯನ್ನು ಬಹೆಗರಿಸಲು ಯತ್ನಿಸುತ್ತಿದ್ದಾರೆ ಎನ್ನಲಾಗಿದೆ. 

ಈಗಾಗಲೇ ಮಹಾ ರ್ಯಾಲಿಯೊಂದನ್ನು ಕರೆಯಲಾಗಿದ್ದು ಈ ರ್ಯಾಲಿಗೆ ವಿವಿಧ ನಾಯಕರನ್ನು ಆಹ್ವಾನಿಸಲಾಗಿದೆ. ಅಲ್ಲದೇ ರ್ಯಾಲಿಗೆ ವಿವಿಧ ಪಕ್ಷಗಳು ಮುಖಂಡರು ಆಗಮಿಸುವ ಬಗ್ಗೆ ಭರವಸೆಯನ್ನೂ ಕೂಡ ನೀಡಿದ್ದಾರೆ ಎನ್ನಲಾಗಿದೆ. 

ಪ್ರಮುಖವಾಗಿ ಸಿಪಿಎಂ, ಸಿಪಿಐ, ಹಾರ್ದಿಕ್ ಪಟೇಲ್, ಜಿಗ್ನೇಶ್ ಮೇವಾನಿ, ಓಮರ್ ಅಬ್ದುಲ್ಲಾಹ್, ಫಾರೂಕ್ ಅಬ್ದುಲ್ಲಾ, ರಾಹುಲ್, ಸೋನಿಯಾ,  ಚಂದ್ರಬಾಬು ನಾಯ್ಡು,  ಅರವಿಂದ್ ಕೇಜ್ರಿವಾಲ್, ಮಾಯಾವತಿ ಅವರನ್ನೂ ಕೂಡ ರ್ಯಾಲಿಗೆ ಆಹ್ವಾನಿಸಿದ್ದಾರೆ. 

ಇದೇ ವೇಳೆ ಕಾಂಗ್ರೆಸ್ ಹಾಗೂ ಮಾಯಾವತಿ ನಡುವಿನ ಅಸಮಾಧಾನವನ್ನು ಶಮನ ಮಾಡುವ ಪ್ರಯತ್ನವನ್ನೂ ಮಾಡಲಿದ್ದಾರೆ ಎನ್ನಲಾಗಿದೆ.

Follow Us:
Download App:
  • android
  • ios