ಬಿಎಸ್ಪಿ ನಾಯಕ ನಸೀಮುದ್ದೀನ್ ಸಿದ್ದಿಕಿ ಹಾಗೂ ಮಾಯಾವತಿ ನಡುವೆ ವಾಕ್ಸಮರ ನಡೆದಿದೆ. ಮಾಯಾವತಿ  ಭಾರತ ಕಂಡ ಅತೀ ದೊಡ್ಡ ಸಾರ್ವಕಾಲಿಕ ಬ್ಲಾಕ್ ಮೇಲರ್ ಎಂದು ಸಿದ್ದಿಕಿ ವಾಗ್ದಾಳಿ ನಡೆಸಿದ್ದಾರೆ.

 ಲಕ್ನೋ (ಮೇ.12): ಬಿಎಸ್ಪಿ ನಾಯಕ ನಸೀಮುದ್ದೀನ್ ಸಿದ್ದಿಕಿ ಹಾಗೂ ಮಾಯಾವತಿ ನಡುವೆ ವಾಕ್ಸಮರ ನಡೆದಿದೆ. ಮಾಯಾವತಿ ಭಾರತ ಕಂಡ ಅತೀ ದೊಡ್ಡ ಸಾರ್ವಕಾಲಿಕ ಬ್ಲಾಕ್ ಮೇಲರ್ ಎಂದು ಸಿದ್ದಿಕಿ ವಾಗ್ದಾಳಿ ನಡೆಸಿದ್ದಾರೆ.

ನಾನು ಅವರಿಗೆ ಬ್ಲಾಕ್’ಮೇಲ್ ಮಾಡಿದ್ದೇನೆ ಎಂದು ಮಾಯಾವತಿ ಆರೋಪಿಸಿದ್ದಾರೆ.ಆದರೆ ಅವರಿಗಿಂತ ದೊಡ್ಡ ಬ್ಲಾಕ್’’ಮೇಲರ್ ಬೇರೋಬ್ಬರಿಲ್ಲ. ನಾನು ನಿನ್ನೆ ಬಿಡುಗಡೆ ಮಾಡಿದ ಆಡಿಯೋದಲ್ಲಿ ಯಾರು ಬ್ಲಾಕ್’ಮೇಲ್ ಮಾಡುತ್ತಿದ್ದಾರೆ ಎಂದು ಮಾಯಾವತಿಯವರನ್ನು ಕೇಳಲು ಇಚ್ಚಿಸುತ್ತೇನೆ ಎಂದು ಸಿದ್ದಿಕಿ ಹೇಳಿದ್ದಾರೆ.

ಪಕ್ಷವನ್ನು ಬಿಡುವಂತೆ ಸಾಕಷ್ಟು ಹಿರಿಯ ಬಿಎಸ್ಪಿ ನಾಯಕರಿಗೆ ಮಾಯಾವತಿ ಟಾರ್ಚರ್ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.