ಮಹಾರಾಷ್ಟ್ರದಲ್ಲಿ ಶಿವಸೇನೆಯೊಂದಿಗೆ ಚುನಾವಣೆ ಎದುರಿಸಲಿದ್ದೇವೆ. ಎನ್‌ಡಿಎಯಿಂದ ಶಿವಸೇನೆಯನ್ನು ಹೊರಗಿಡುವುದು ನಮಗಿಷ್ಟವಿಲ್ಲ. ಆದರೆ, ಅವರಾಗಿಯೇ ಹೊರಹೋಗಲು ಬಯಸಿದಲ್ಲಿ, ಅದು ಅವರಿಚ್ಛೆಗೆ ಬಿಟ್ಟಿದ್ದು. ನಾವು ಎಲ್ಲ ಪರಿಸ್ಥಿತಿಗೂ ಸಿದ್ಧರಾಗಿದ್ದೇವೆ ಎಂದು ಶಾ ಹೇಳಿದರು.
ನವದೆಹಲಿ(ಮೇ.26): 2019ರ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ ಬಿಎಸ್‌ಪಿ-ಎಸ್‌ಪಿ ಮೈತ್ರಿಯಾದಲ್ಲಿ, ಬಿಜೆಪಿಗೆ ಸವಾಲಾಗಲಿದೆ ಎಂದು ಪಕ್ಷದ ಅಧ್ಯಕ್ಷ ಅಮಿತ್ ಶಾ ಒಪ್ಪಿಕೊಂಡಿದ್ದಾರೆ. ಆದರೆ, ರಾಯ್ ಬರೇಲಿ ಅಥವಾ ಅಮೇಠಿಯಲ್ಲಿ ಕಾಂಗ್ರೆಸ್ ಅನ್ನು ಬಿಜೆಪಿ ಸೋಲಿಸಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮೋದಿ ಸರ್ಕಾರ ನಾಲ್ಕು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಪತ್ರಕರ್ತರು ಕೇಳಿದ ಪ್ರಶ್ನೆಗೆ ಅವರು ಉತ್ತರಿಸಿದರು. ಮಹಾರಾಷ್ಟ್ರದಲ್ಲಿ ಶಿವಸೇನೆಯೊಂದಿಗೆ ಚುನಾವಣೆ ಎದುರಿಸಲಿದ್ದೇವೆ. ಎನ್‌ಡಿಎಯಿಂದ ಶಿವಸೇನೆಯನ್ನು ಹೊರಗಿಡುವುದು ನಮಗಿಷ್ಟವಿಲ್ಲ. ಆದರೆ, ಅವರಾಗಿಯೇ ಹೊರಹೋಗಲು ಬಯಸಿದಲ್ಲಿ, ಅದು ಅವರಿಚ್ಛೆಗೆ ಬಿಟ್ಟಿದ್ದು. ನಾವು ಎಲ್ಲ ಪರಿಸ್ಥಿತಿಗೂ ಸಿದ್ಧರಾಗಿದ್ದೇವೆ ಎಂದು ಶಾ ಹೇಳಿದರು.
ಪ್ರತಿಪಕ್ಷಗಳು 2014ರಲ್ಲೂ ಜೊತೆಯಾಗಿ ಸ್ಪರ್ಧಿಸಿದ್ದವು. ಆದರೆ, ನಮ್ಮನ್ನು ತಡೆಯುವಲ್ಲಿ ವಿಫಲವಾಗಿದ್ದವು. ಅವರೆಲ್ಲ ಜೊತೆಗೂಡಿದರೂ ನಮ್ಮನ್ನು ಸೋಲಿಸಲು ಸಾಧ್ಯವಿಲ್ಲ. ಕಳೆದ ಚುನಾವಣೆಯಲ್ಲಿ ಗೆಲ್ಲಲಾಗದ ಕನಿಷ್ಠ 80 ಸೀಟುಗಳನ್ನು 2019ರ ಚುನಾವಣೆಯಲ್ಲಿ ಗೆಲ್ಲಲಿದ್ದೇವೆ ಎಂದು ಮೋದಿ ಹೇಳಿದರು.
