ಜಲಿಯನ್ ವಾಲಾಬಾಗ್ ಹತ್ಯಾಕಾಂಡ ಸ್ವಾತಂತ್ರ ಹೋರಾಟಗಾರರಿಗೆ ಗೌರವ ಸಲ್ಲಿಸಿದ ಸೆಹ್ವಾಗ್, ಈ ನೀಚ ಕೃತ್ಯದ ರೂವಾರಿ ಡಯರ್'ನನ್ನು ಈಡಿಯಟ್ ಎಂದು ಬಣ್ಣಿಸಿ ಟ್ವಿಟ್ ಮಾಡಿದ್ದಾ

ಇಂದಿಗೆ ಸರಿಯಾಗಿ 98 ವರ್ಷಗಳ ಹಿಂದೆ ನಡೆದ ಜಲಿಯನ್ ವಾಲಾಬಾಗ್ ಹತ್ಯಾಕಾಂಡ ಭಾರತದ ಇತಿಹಾಸದಲ್ಲಿ ಎಂದೂ ಮರೆಯಲಾರದ ದುರಂತ ದಿನ.

1919 ಏಪ್ರಿಲ್ 13ರ ಬೈಸಾಕಿ ಹಬ್ಬದಂದು ಅಮೃತ್'ಸರದ ಜಲಿಯನ್ ವಾಲಾಬಾಗ್ ಭಾರತೀಯ ಸ್ವಾತಂತ್ರ್ಯ ಹೋರಾಟಗಾರರು ಶಾಂತಿಯುತವಾಗಿ ಸಭೆ ನಡೆಸುತ್ತಿರುತ್ತಾರೆ. ಈ ವೇಳೆ ಬ್ರಿಟೀಷ್ ಹೇಡಿ ಬ್ರಿಗೇಡರ್ ಜನರಲ್ ಡೈಯರ್ ತನ್ನ 50 ಮಂದಿ ಸೈನಿಕರಿಂದ ಅಲ್ಲಿ ನೆರೆದಿದ್ದ ಅಮಾಯಕರ ಮೇಲೆ ಏಕಾಏಕಿ ಸುಮಾರು 15 ನಿಮಿಷಗಳ ಕಾಲ 1,650 ಸುತ್ತು ಗುಂಡಿನ ದಾಳಿ ನಡೆಸುತ್ತಾರೆ. ಈ ಘಟನೆಯಲ್ಲಿ ಬ್ರಿಟೀಷ್ ಅಂಕಿಅಂಶಗಳ ಪ್ರಕಾರ ಒಂದು ಸಾವಿರ ಮಂದಿ ಮೃತಪಟ್ಟರೆ, 1,100 ಮಂದಿ ತೀವ್ರವಾಗಿ ಗಾಯಗೊಂಡಿದ್ದರು ಎಂದು ದಾಖಲಾಗಿದೆ. ಈ ಹೇಯ ಘಟನೆಯ ಕುರಿತು ಬ್ರಿಟಿಷ್ ರಾಜಮನೆತನವಾಗಲಿ, ಇಲ್ಲವೇ ಅಲ್ಲಿನ ಸರ್ಕಾರವಾಗಲಿ ಇಲ್ಲಿಯವರೆಗೂ ಕ್ಷಮೆ ಕೋರಿಲ್ಲ...

ಜಲಿಯನ್ ವಾಲಾಬಾಗ್ ಹತ್ಯಾಕಾಂಡ ಸ್ವಾತಂತ್ರ ಹೋರಾಟಗಾರರಿಗೆ ಗೌರವ ಸಲ್ಲಿಸಿದ ಸೆಹ್ವಾಗ್, ಈ ನೀಚ ಕೃತ್ಯದ ರೂವಾರಿ ಡಯರ್'ನನ್ನು ಈಡಿಯಟ್ ಎಂದು ಬಣ್ಣಿಸಿ ಟ್ವಿಟ್ ಮಾಡಿದ್ದು ಹೀಗೆ..

Scroll to load tweet…