ಬೆಂಗಳೂರು(ಜೂ.20) : ಕಾಂಗ್ರೆಸ್‌ನಿಂದ ಅಮಾನತುಗೊಂಡ ಮಾಜಿ ಸಚಿವ ರೋಷನ್ ಬೇಗ್ ಜತೆ ಗುರುತಿಸಿಕೊಂಡ ಬಿಬಿಎಂ ಪಿಯ ಇಬ್ಬರು ಸದಸ್ಯರ ಬಗ್ಗೆ ವರದಿ ನೀಡುವಂತೆ ಪಾಲಿಕೆ ಯ ಆಡಳಿತ ಪಕ್ಷದ ನಾಯಕ ಅಬ್ದುಲ್ ವಾಜೀದ್‌ಗೆ ಕೆಪಿ ಸಿಸಿ ಸೂಚಿಸಿದೆ. 

ಕಾಂಗ್ರೆಸ್ ಪಕ್ಷದಿಂದ  ಅಮಾನತುಗೊಂಡ ಮಾಜಿ ಸಚಿವ ಹಾಗೂ ಶಿವಾಜಿನಗರದ ಶಾಸಕ ರೋಷನ್ ಬೇಗ್ ಅವರು ಬುಧವಾರ ನಡೆಸಿದ ಪತ್ರಿಕಾಗೋಷ್ಠಿಯ ಲ್ಲಿ ಜಯಮಹಲ್ ವಾರ್ಡ್‌ನ ಸದಸ್ಯ ಎಂ.ಕೆ. ಗುಣಶೇಖರ್ ಹಾಗೂ ಭಾರತಿನಗರ ವಾರ್ಡ್ ನ ಶಕೀಲ್ ಅಹಮದ್ ಅವರು ಪಾಲ್ಗೊಂಡಿದ್ದರು. 

ಪಕ್ಷ ಅಮಾನತು  ಮಾಡಿರುವ ರೋಷನ್ ಬೇಗ್ ಜೊತೆಗೆ ಪಾಲಿಕೆ ಸದಸ್ಯರು ಕಾಣಿಸಿಕೊಳ್ಳುವುದಕ್ಕೆ ಕಾರಣ ಏನು ಎಂಬುರ ಬಗ್ಗೆ ಮಾಹಿತಿ ನೀಡುವಂತೆ ಕೆಪಿಸಿಸಿ ಸೂಚಿಸಿದೆ.