ಚುನಾವಣೆ ವೇಳೆ ಇಂಥವರೇ ಗೆಲ್ಲುತ್ತಾರೆ ಅಥವಾ ಇಂಥವರು ಮುನ್ನಡೆ ಸಾಧಿಸುತ್ತಾರೆ ಸಮೀಕ್ಷೆ ಪ್ರಕಟ, ಭವಿಷ್ಯ ನುಡಿಯುವುದು ಸಾಮಾನ್ಯ. ಆದರೆ ಇಂಥ ಭವಿಷ್ಯವೊಂದು ಬ್ರಿಟನ್‌ನಲ್ಲಿ ಲೇಖಕರೊಬ್ಬರಿಗೆ ಸಂಕಷ್ಟತಂದಿಟ್ಟಿದೆ. ತಾವು ನುಡಿದ ಭವಿಷ್ಯ ಉಲ್ಟಾಆದ ಹಿನ್ನೆಲೆಯಲ್ಲಿ ಲೇಖಕರು ಟೀವಿ ನೇರ ಪ್ರಸಾರದಲ್ಲೇ ತಾವು ಬರೆದ ಪುಸ್ತಕವನ್ನು ತಿನ್ನುವಂತಾಗಿದೆ.

ಲಂಡನ್‌(ಜೂ.12): ಚುನಾವಣೆ ವೇಳೆ ಇಂಥವರೇ ಗೆಲ್ಲುತ್ತಾರೆ ಅಥವಾ ಇಂಥವರು ಮುನ್ನಡೆ ಸಾಧಿಸುತ್ತಾರೆ ಸಮೀಕ್ಷೆ ಪ್ರಕಟ, ಭವಿಷ್ಯ ನುಡಿಯುವುದು ಸಾಮಾನ್ಯ. ಆದರೆ ಇಂಥ ಭವಿಷ್ಯವೊಂದು ಬ್ರಿಟನ್‌ನಲ್ಲಿ ಲೇಖಕರೊಬ್ಬರಿಗೆ ಸಂಕಷ್ಟತಂದಿಟ್ಟಿದೆ. ತಾವು ನುಡಿದ ಭವಿಷ್ಯ ಉಲ್ಟಾಆದ ಹಿನ್ನೆಲೆಯಲ್ಲಿ ಲೇಖಕರು ಟೀವಿ ನೇರ ಪ್ರಸಾರದಲ್ಲೇ ತಾವು ಬರೆದ ಪುಸ್ತಕವನ್ನು ತಿನ್ನುವಂತಾಗಿದೆ.

ಕೆಂಟ್‌ ವಿವಿಯಲ್ಲಿ ರಾಜ್ಯಶಾಸ್ತ್ರದ ಉಪನ್ಯಾಸಕರಾಗಿರುವ ಮ್ಯಾಥ್ಯೂ ಗುಡ್‌ವಿನ್‌, ‘ಬ್ರೆಕ್ಸಿಟ್‌: ವೈ ಬ್ರಿಟನ್‌ ವೋಟೆಡ್‌ ಟು ಲೀವ್‌ ದ ಯುರೋಪಿಯನ್‌ ಯೂನಿಯನ್‌' ಎಂಬ ಪುಸ್ತಕ ಬರೆದಿದ್ದಾರೆ. ಇತ್ತೀಚಿನ ಲಂಡನ್‌ ಸಂಸತ್‌ ಚುನಾವಣೆಗೂ ಮುನ್ನ, ಗುಡ್‌ವಿನ್‌ ಅವರು, ಚುನಾವಣೆಯಲ್ಲಿ ಲೇಬರ್‌ ಪಕ್ಷ ಶೇ.38ಕ್ಕಿಂತ ಹೆಚ್ಚು ಮತ ಪಡೆಯುವುದಿಲ್ಲ. ಪಡೆದರೆ ನಾನು, ನನ್ನ ಪುಸ್ತಕವನ್ನೇ ತಿನ್ನುತ್ತೇನೆ ಎಂದು ಸವಾಲು ಹಾಕಿದ್ದರು. ಚುನಾವಣೆಯಲ್ಲಿ ಲೇಬರ್‌ ಪಕ್ಷ ಶೇ.40.3ರಷ್ಟುಮತ ಪಡೆದಿತ್ತು. ಈ ಹಿನ್ನೆಲೆಯಲ್ಲಿ ಗುಡ್‌ವಿನ್‌ ಸ್ಕೈನೂಸ್‌ ಚಾನೆಲ್‌ನಲ್ಲಿ ನೇರಪ್ರಸಾರದ ವೇಳೆ ತಾವು ಬರೆದ ಪುಸ್ತಕವನ್ನು ಹರಿದು ತಿಂದಿದ್ದಾರೆ.