ಗರ್ಭಿಣಿ ಮತ್ತು ಬಾಣಂತಿಯರಿಗೆ ಅಂಗನವಾಡಿ ಕೇಂದ್ರಗಳಲ್ಲಿ ಉಚಿತ ಪೌಷ್ಟಿಕ ಆಹಾರ ನೀಡುವ ‘ಮಾತೃಪೂರ್ಣ’ ಯೋಜನೆ ಬರುವ ಅಕ್ಟೋಬರ್ ಎರಡರಿಂದ ರಾಜ್ಯಾದ್ಯಂತ ಜಾರಿಯಾಗಲಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಹಾಗೂ ಸಂಸ್ಕೃತಿ ಸಚಿವೆ ಉಮಾಶ್ರೀ ಹೇಳಿದ್ದಾರೆ.
ಬೆಂಗಳೂರು(ಸೆ.18): ಗರ್ಭಿಣಿ ಮತ್ತು ಬಾಣಂತಿಯರಿಗೆ ಅಂಗನವಾಡಿ ಕೇಂದ್ರಗಳಲ್ಲಿ ಉಚಿತ ಪೌಷ್ಟಿಕ ಆಹಾರ ನೀಡುವ ‘ಮಾತೃಪೂರ್ಣ’ ಯೋಜನೆ ಬರುವ ಅಕ್ಟೋಬರ್ ಎರಡರಿಂದ ರಾಜ್ಯಾದ್ಯಂತ ಜಾರಿಯಾಗಲಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಹಾಗೂ ಸಂಸ್ಕೃತಿ ಸಚಿವೆ ಉಮಾಶ್ರೀ ಹೇಳಿದ್ದಾರೆ.
ಸುವರ್ಣ ನ್ಯೂಸ್'ನ ‘ಹಲೋ ಮಿನಿಸ್ಟರ್’ ನೇರ ಫೋನ್ ಇನ್ ಕಾರ್ಯಕ್ರಮದಲ್ಲಿ ವೀಕ್ಷಕರ ಪ್ರಶ್ನೆಗಳಿಗೆ ಉತ್ತರಿಸಿದ ಸಚಿವರು, ಈ ಘೋಷಿತ ಯೋಜನೆ ಪ್ರಾಯೋಗಿಕವಾಗಿ ನಾಲ್ಕು ತಾಲೂಕುಗಳಲ್ಲಿ ಯಶಸ್ವಿ ಯಾಗಿದ್ದು, ಇದನ್ನು ಈಗ ರಾಜ್ಯಾದ್ಯಂತ ಜಾರಿಗೊಳಿಸಲು ಸಿದ್ಧತೆ ನಡೆಸಲಾಗಿದೆ ಎಂದರು.
ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಿಗೆ ಮತ್ತು ಬಾಣಂತಿಯರಿಗೆ ಸರಿಯಾಗಿ ಆಹಾರ ಪದಾರ್ಥ ನೀಡುತ್ತಿಲ್ಲ ಎಂದು ರಾಯಚೂರಿನ ಶರಣಪ್ಪ ದೂರಿದರು. ಇದಕ್ಕೆ ಸ್ಪಂದಿಸಿದ ಸಚಿವೆ, ರಾಜ್ಯದಲ್ಲಿ ಗರ್ಭಿಣಿಯರು ಮತ್ತು ಬಾಣಂತಿಯರಿಗೆ ಅಂಗನ ವಾಡಿ ಕೇಂದ್ರಗಳಲ್ಲಿ ಹಾಲು, ಮೊಟ್ಟೆ, ಊಟ, ಔಷ‘ ಸೇರಿದಂತೆ ಪೌಷ್ಟಿಕ ಆಹಾರ ನೀಡುವ ‘ಮಾತೃಪೂರ್ಣ’ ಎಂಬ ಯೋಜನೆಯನ್ನು ಮಧು ಗಿರಿ, ಮಾನ್ವಿ, ಎಚ್.ಡಿ.ಕೋಟೆ ಹಾಗೂ ಜಮಖಂಡಿ ತಾಲೂಕುಗಳಲ್ಲಿ ಪ್ರಾಯೋಗಿಕವಾಗಿ ಆರಂಭಿಸಲಾಗಿತ್ತು. ಯೋಜನೆಯಿಂದ ಗರ್ಭಿಣಿಯರು ಪೌಷ್ಟಿಕಾಂಶಗಳನ್ನು ಪಡೆದು ಪ್ರಸವದ ವೇಳೆ ಆಗಬಹು ದಾಗಿದ್ದ ಅನಾಹುತುಗಳಿಂದ ದೂರವಾಗಿದ್ದಾರೆ. ಹಾಗೆಯೇ ಬಾಣಂತಿಯರು ಕೂಡ ಪೌಷ್ಟಿಕತೆಯೊಂದಿಗೆ ಆರೋಗ್ಯ ಸಾಧಿಸಿದ್ದಾರೆ. ಇದನ್ನಾಧರಿಸಿ ಈಗ ರಾಜ್ಯಾದ್ಯಂತ ಯೋಜನೆ ಜಾರಿಗೊಳಿಸಲಾಗುತ್ತದೆ ಎಂದರು.
ಮಹಿಳೆಯರ ಸಬಲೀಕರಣಕ್ಕಾಗಿ ಮಹಿಳಾ ಸ್ವಸಹಾಯ ಸಂಘಗಳಿಗೆ ಸುಮಾರು ₹ 2 ಕೋಟಿವರೆಗೂ ಸಾಲ ನೀಡಲಾಗುತ್ತದೆ. ಇದರಲ್ಲಿ ಉದ್ಯಮ ಸ್ಥಾಪನೆಗೆ ನೀಡುವ ಸಾಲ ಸೌಲಭ್ಯದಲ್ಲಿ 2 ಲಕ್ಷದವರೆಗೂ ಬಡ್ಡಿರಹಿತ ಸಾಲ ಸೌಲಭ್ಯ ನೀಡಲಾಗುತ್ತದೆ. ಹಾಗೆಯೇ ಉದ್ಯಮ ಸ್ಥಾಪನೆ
2 ಕೋಟಿವರೆಗೂ ಸಾಲ ನೀಡಲಾಗುತ್ತದೆ. ಇದರಲ್ಲಿ ಉದ್ಯಮ ಸ್ಥಾಪನೆಗೆ ನೀಡುವ ಸಾಲ ಸೌಲಭ್ಯದಲ್ಲಿ 5 ಲಕ್ಷ ವರೆಗಿನ ಸಾಲಕ್ಕೆ ಶೇ.14ರಷ್ಟು ಬಡ್ಡಿ ವಿಧಿಸಲಾಗುತ್ತದೆ. ಈ ಬಡ್ಡಿಯಲ್ಲಿ ಶೇ.10ರಷ್ಟು ಬಡ್ಡಿಯನ್ನು ನಮ್ಮ ಇಲಾಖೆ ಪಾವತಿಸುತ್ತದೆ. ಉಳಿದ ಶೇ.4ರಷ್ಟು ಬಡ್ಡಿಯನ್ನು ಲಾನುಭವಿ ಮಹಿಳೆ ಭರಿಸಬೇಕು. ಈ ಸೌಲಭ್ಯಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಒಪ್ಪಿಗೆ ಸೂಚಿಸಿದ್ದಾರೆ ಎಂದು ಉಮಾಶ್ರೀ ವಿವರಿಸಿದರು.
ಇದೇ ವೇಳೆ ಕೋಲಾರ ಜಿಲ್ಲೆಯಲ್ಲಿ ಅಂಗವಿಕಲರ ಕಲ್ಯಾಣ ಯೋಜನೆಯ ಹಣ 20 ಲಕ್ಷ ದುರ್ಬಳಕೆಯಾಗಿದ್ದು, ಈ ಬಗ್ಗೆ ತನಿಖೆ ನಡೆಸುವಂತೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರೇ ಆದೇಶಿಸಿದ್ದಾರೆ. ಆದರೂ ಅಧಿಕಾರಿಗಳು ಯಾವುದೇ ತನಿಖೆ ನಡೆಸುತ್ತಿಲ್ಲ ಎಂದು ಸುವರ್ಣ ನ್ಯೂಸ್ ಮಾಡಿದ ವರದಿಗೆ ಸಚಿವರು ಸ್ಪಂದಿಸಿದರು. ಚಾಮರಾಜನಗರದಲ್ಲಿ ಡಾ.ರಾಜ್ ಕಲಾಭವನ ನಿರ್ಮಾಣ 12 ವರ್ಷಗಳಿಂದ ಅರ್ಧಕ್ಕೆ ನಿಂತಿರುವ ಬಗ್ಗೆ ಕಲಾವಿದ ನರಸಿಂಹಮೂರ್ತಿ ಗಮನ ಸೆಳೆದಾಗ, ತಕ್ಷಣವೇ ಕಾಮಗಾರಿ ಆರಂಭಿಸಲು ಸೂಚಿಸಿದರು.
